Monday, September 28, 2026

BDA Apartments

ಮೈಸೂರಿನಲ್ಲಿ ಯುವಕನ ಕೊಲೆ ಪ್ರಕರಣ: ಆರೋಪಿಯ ತಂದೆ ಮತ್ತು ತಾಯಿ ಸಾವು BDA JK_Adv BDA Adv
Home Crime ಮೈಸೂರಿನಲ್ಲಿ ಯುವಕನ ಕೊಲೆ ಪ್ರಕರಣ: ಆರೋಪಿಯ ತಂದೆ ಮತ್ತು ತಾಯಿ ಸಾವು.

ಮೈಸೂರಿನಲ್ಲಿ ಯುವಕನ ಕೊಲೆ ಪ್ರಕರಣ: ಆರೋಪಿಯ ತಂದೆ ಮತ್ತು ತಾಯಿ ಸಾವು.

ಮೈಸೂರು,ಆಗಸ್ಟ್,22,2023(www.justkannada.in): ಮೈಸೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯ ತಂದೆ ಮತ್ತು ತಾಯಿ ಇನ್ನರು ಮೃತಪಟ್ಟಿರುವ ಘಟನೆ ನಡೆದಿದೆ.

ಪ್ರಕರಣದ ಆರೋಪಿ ತೇಜಸ್ ತಾಯಿ  ಇಂದ್ರಾಣಿ (35) ಆತ್ಮಹತ್ಯೆಗೆ ಶರಣಾಗಿದ್ದರೇ ತಂದೆ ಸಾಮ್ರಾಟ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ತೇಜಸ್, ಸಂಜಯ್, ಕಿರಣ್ ಹಾಗೂ ತೇಜಸ್ ತಂದೆ ಸಾಮ್ರಾಟ್ ವಿರುದ್ದ ಕೊಲೆ ಆರೋಪವಿತ್ತು.

ಆಗಸ್ಟ್ 20 ರಂದು ಮೈಸೂರಿನ ವಿದ್ಯಾನಗರದಲ್ಲಿ  ಬಾಲರಾಜ್‌(28) ಎಂಬ ಯುವಕನನ್ನ ಸ್ನೇಹಿತರೇ ಕೊಲೆ‌ ಮಾಡಿದ್ದರು. ಈ ಕುರಿತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲರಾಜ್ ಕೊಲೆ ಪ್ರಕರಣದಲ್ಲಿ ತೇಜಸ್ ಮತ್ತು ಈತನ ತಂದೆ ಸಾಮ್ರಾಟ್ ಆರೋಪಿಯಾಗಿದ್ದರು. ಪುತ್ರನ ಜೊತೆಗೆ ತಂದೆ ಸಾಮ್ರಾಟ್ ಜೈಲು ಸೇರಿದ್ದರು. ಈ ಅವಮಾನವನ್ನ ತಾಳಲಾರದೆ ಮೊದಲಿಗೆ ತೇಜಸ್ ತಾಯಿ ಇಂದ್ರಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ , ಬಳಿಕ ತಂದೆ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ ಘಟನೆ ನಡೆದಿದೆ.

Key words: murder case – Mysore- Accused’s -father – mother- die.