ಕಾನೂನು ಎಲ್ಲರಿಗೂ ಒಂದೆ: ಯಾರೇ ತಪ್ಪು ಮಾಡಿದ್ರೂ ಕ್ರಮ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜೂನ್,12,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾನಾಗಲಿ, ದರ್ಶನ್ ಆಗಲಿ ಕಾನೂನು ಎಲ್ಲರಿಗೂ ಒಂದೆ. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್,  ಕಾನೂನನ್ನ ಯಾರು ಕೈಗೆತ್ತಿಕೊಳ್ಳಬಾರದು  ಕೊಲೆ ಕೇಸ್ ನಲ್ಲಿ ದರ್ಶನ್ ಭಾಗಿಯಾಗಿದ್ದಾರೆಂಬ ಬಗ್ಗೆ ತನಿಖೆ ನಡೆಯಲಿದೆ. ದರ್ಶನ್ ಕೇಸ್ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗಾಗಲೇ 13 ಆರೋಪಿಗಳನ್ನ ಬಂಧಿಸಲಾಗಿದೆ.  ಕೊಲೆ ಯಾರು ಮಾಡಿದ್ದಾರೆ ಯಾಕೆ ಮಾಢಿದ್ದಾರೆ ಎಲ್ಲಾ ವಿಚಾರಗಳು ತನಿಖೆಯಲ್ಲಿ ಗೊತ್ತಾಗಲಿದೆ ಎಂದರು.

ನಟ ದರ್ಶನ್  ಮೇಲೆ ರೌಡಿಶೀಟ್  ಒಪನ್ ಮಾಡುವ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಪೊಲೀಸರು ಎಲ್ಲ ರೀತಿಯಲ್ಲಿ ಸಮರ್ಥರಿದ್ದಾರೆ . ತನಿಖೆ ಬಳಿಕ ಏನು ಶಿಫಾರಸ್ಸು ಮಾಡ್ತಾರೆ ನೋಡೋಣ ಎಂದರು.

ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ.  ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: murder, case, Darshan, Home Minister, G. Parameshwar