ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿಗಳನ್ನ ಕರೆತಂದು ಸ್ಥಳ ಮಹಜರು.

ಬೆಂಗಳೂರು,ಜೂನ್,12,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಎಸೆದಿದ್ದ ಸ್ಥಳಕ್ಕೆ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ್ದ ಆರೋಪಿಗಳು ಸುಮನಹಳ್ಳಿ ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ಬಳಿ ಶವ ಎಸೆದಿದ್ದರು. ಇದೀಗ ನಟ ದರ್ಶನ್ , ಪವಿತ್ರಾಗೌಡ ಹೊರತುಪಡಿಸಿ ಉಳಿದ ಆರೋಪಿಗಳನ್ನ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ಕಾರ್ತಿಕ್ ನಿಖಿಲ್ ರಾಘವೇಂದ್ರ ಸೇರಿ ಆರೋಪಿಗಳನ್ನ  ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಶವ ಎಸೆಯುವ ವೇಳೆ ನಟ ದರ್ಶನ್ ಹಾಗೂ ಪವಿತ್ರಗೌಡ  ಸ್ಥಳದಲ್ಲಿ ಇರದ ಹಿನ್ನೆಲೆಯಲ್ಲಿ ಸ್ಥಳ ಮಹಜರಿಗೆ ಕರೆತಂದಿಲ್ಲ ಎನ್ನಲಾಗಿದೆ.

Key words: Renukaswamy, murder, case, accused