Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವ ಕಗ್ಗೋಲೆ: ಸಿಎಂ ಗಮನಕ್ಕೆ ಬಾರದೆ ಹಗರಣ ನಡೆದಿಲ್ಲ- ಆರ್.ಅಶೋಕ್

ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವ ಕಗ್ಗೋಲೆ: ಸಿಎಂ ಗಮನಕ್ಕೆ ಬಾರದೆ ಹಗರಣ ನಡೆದಿಲ್ಲ- ಆರ್.ಅಶೋಕ್

ಬೆಂಗಳೂರು,ಜುಲೈ,3,2024 (www.justkannada.in): ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾದಲ್ಲಿ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸುತ್ತಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇಂದು ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ನಾಯಕರನ್ನ ತಡೆದು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್,  ವಾಲ್ಮೀಕಿ ನಿಗಮದ ಹಗರಣಕ್ಕಿಂತಲೂ ಮುಡಾ ಹಗರಣ ಬೃಹತ್ ಹಗರಣವಾಗಿದೆ. ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಹರಿಹಾಯ್ದರು.ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವ ಕಗ್ಗೋಲೆ: ಸಿಎಂ ಗಮನಕ್ಕೆ ಬಾರದೆ ಹಗರಣ ನಡೆ...

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ರಾಜ್ಯ ಸರಕಾರ ಹಗಲು ದರೋಡೆ ಮಾಡುತ್ತಿದೆ.  ಹಗರಣದ ಬಳಿಕ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದಾರೆ. ಸಿಎಂ ಗಮನಕ್ಕೆ ಬಾರದೆ ಈ ಹಗರಣ ನಡೆದಿಲ್ಲ. ಮೈಸೂರು ಮುಡಾದಿಂದ ಕಡತಗಳನ್ನ ತಂದಿದ್ದಾರೆ ಎಂದು ಕಿಡಿಕಾರಿದರು.

Key words: muda, currption, protest, R. Ashok