Thursday, October 1, 2026

BDA Apartments

Home Front Page MUDA; ಮಾಜಿ ಆಯುಕ್ತರಿಗೂ ಶುರುವಾಯ್ತು ಢವ..ಢವ..!

MUDA; ಮಾಜಿ ಆಯುಕ್ತರಿಗೂ ಶುರುವಾಯ್ತು ಢವ..ಢವ..!

MUDA; ಮಾಜಿ ಆಯುಕ್ತರಿಗೂ ಶುರುವಾಯ್ತು ಢವ..ಢವ..! puliyogare,ayyangar WhatsApp 11 16 at 12.03.42 PM

ಮೈಸೂರು,ನವೆಂಬರ್,16,2024 (www.justkannada.in):  ಮುಡಾ ಹಗರಣ ಸಂಬಂಧ ಇದೀಗ ಮಾಜಿ ಆಯುಕ್ತರಿಗೂ ಎದೆಯಲ್ಲಿ ಢವ..ಢವ ಶುರುವಾಗಿದ್ದು ,  ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ವಿಚಾರಣೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಮುಡಾ ಆಯುಕ್ತರಾಗಿ ಇದೀಗ ನಿವೃತ್ತರಾಗಿ ಜೆಎಸ್ಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿರುವ ಸಿ.ಜಿ.ಬೆಟ್ಸೂರ್ ಮಠ್ ಅವರನ್ನು ಲೋಕಾಯುಕ್ತ ಎಸ್ಪಿ ಉದೇಶ್ ಅವರು ವಿಚಾರಣೆಗೊಳಪಡಿಸಿದ್ದಾರೆ. ಈ ಹಿಂದೆ ಮುಡಾ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ವಹಿಸಿದ್ದರಿಂದ ಹೇಳಿಕೆ ನೀಡಲು ಅವರನ್ನು ಕರೆಸಲಾಗಿತ್ತು.  ಸುಮಾರು ಅರ್ಧ ಗಂಟೆಗಳ ಕಾಲ ಬೆಟ್ಸೂರ್ ಮಠ ಅವರನ್ನ ವಿಚಾರಣೆಗೊಳಪಡಿಸಲಾಗಿದೆ.

ಇನ್ನು ಮುಂದಿನ ವಾರದಿಂದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.  ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೆ  ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿಂದಿನ ಆಯುಕ್ತರುಗಳಿಗೂ ನೋಟಿಸ್ ನೀಡಲು ಲೋಕಾಯುಕ್ತ ಎಸ್ಪಿ ಉದೇಶ್ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ನಟೇಶ್ ಗೂ ಮುನ್ನ ಕರ್ತವ್ಯ ನಿರ್ವಹಿಸಿದ್ದ ಮಾಜಿ ಆಯುಕ್ತರು ಕಾರ್ಯದರ್ಶಿಗಳಿಗೂ  ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಲಿದ್ದಾರೆ. ಮುಂದಿನ ವಾರ ಬಹುತೇಕರಿಗೆ ನೋಟಿಸ್ ನೀಡಲಿದ್ದು, ಇದಕ್ಕಾಗಿ ಲೋಕಾಯುಕ್ತ ಎಸ್ಪಿ ಉದೇಶ್ ತಯಾರಿ ನಡೆಸಿದ್ದಾರೆ.  ಹಿಂದಿನ ಆಯುಕ್ತರಾಗಿದ್ದ  ಡಾ.ಮಹೇಶ್,  ಪಿ.ಎಸ್.ಕಾಂತರಾಜ್, ದಿನೇಶ್  ಅವರಿಗೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಒಟ್ಟಾರೆ  2010 ರಿಂದ ಈವರೆಗೆ  ಮುಡಾದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Key words: MUDA case,  ex-commissioner, notice, lokayukta