ಕೆಆರ್ ಎಸ್ ಡ್ಯಾಮ್ ಸೋರದಂತೆ ಸಂಸದೆ ಸುಮಲತಾರನ್ನ ಮಲಗಿಸಬೇಕು- ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

ಬೆಂಗಳೂರು,ಜುಲೈ,5,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.jk

ಕೆ.ಆರ್.‌ಎಸ್. ರಕ್ಷಣೆಯನ್ನು ಅವರೇ ಹೊತ್ತುಕೊಂಡಂತೆ ಕಾಣುತ್ತಿದೆ. ಕೆಆರ್ ಎಸ್  ಡ್ಯಾಂ ಅನ್ನು ಇವರೇ ರಕ್ಷಣೆ ಮಾಡುವ ರೀತಿ ಹೇಳ್ತಿದ್ದಾರೆ.  ಕೆ.ಆರ್‌.ಎಸ್ ಡ್ಯಾಂ ಸೋರುತ್ತಿದ್ದರೇ ಅದು ಸೋರದಂತೆ ಸಂಸದೆ ಸುಮಲತಾರನ್ನ ಮಲಗಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸಿಎಂ ಬಿಎಸ್ ವೈ ಭೇಟಿಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಗೆ ಇಂತಹ ಸಂಸದೆ ಹಿಂದೆ ಬಂದಿಲ್ಲ. ಮುಂದೆಯೂ ಬರೋದಿಲ್ಲ. ಅನುಕಂಪದ ಅಲೆ ಮೇಲೆ ಅವರು ಮಂಡ್ಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಸಿಕೊಳ್ಳಲಿ.  ಸಂಸದರಾಗಿ ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲಿ ಎಂದು ಟಾಂಗ್ ನೀಡಿದರು.

Key words: MP Sumalatha- KRS Dam-former CM- H. D.Kumaraswamy