Friday, August 14, 2026

BDA Apartments

Home Front Page ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಶಾಸಕ ಜಿ.ಟಿ ದೇವೇಗೌಡ: ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಶಾಸಕ ಜಿ.ಟಿ ದೇವೇಗೌಡ: ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.

ಮೈಸೂರು,ಜುಲೈ,5,2021(www.justkannada.in): ಇಂದಿನಿಂದ ಅನ್ ಲಾಕ್ 3 ಹಿನ್ನೆಲೆ ದೇಗುಲಗಳನ್ನ ತೆರೆಯಲು ಅನುಮತಿ ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಸಾಮಾಜಿಕ ಅಂತರ , ಮಾಸ್ಕ್ ಧರಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.

ಇಂದಿನಿಂಧ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದ್ದು ಪ್ರತಿಯೊಬ್ಬ ಭಕ್ತಾದಿಗಳಗೂ ಥರ್ಮಲ್ ಸ್ಕಾನಿಂಗ್ ಮಾಡಲಾಗುತ್ತಿದೆ. ಈ ಮಧ್ಯೆ ಶಾಸಕ ಜಿಟಿ ದೇವೇಗೌಡರು ಚಾಮುಂಡಿ ಬೆಟ್ಟಕ್ಕೆ  ಶಾಸಕ ಜಿ ಟಿ ದೇವೇಗೌಡ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ಇದೇ ವೇಳೆ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.  ಸಿಂಗಲ್ ಲೈನ್ ನಲ್ಲಿ ಬಿಡಬೇಕು. ಗುಂಪು‌ಸೇರಿಸಿ ಎರಡು ಲೈನ್ ಮಾಡಿದ್ರೆ ಕೆಲಸ ಕಳೆದುಕೊಳ್ಳುತ್ತಿರಾ. ಮಿನಿಸ್ಟರ್ ಬಂದ್ರು ಸಿಂಗಲ್ ಲೈನೇ ಹೋಗಬೇಕು ಎಂದು ಅಧಿಕಾರಿಗಳಿಗೆ ಶಾಸಕ ಜಿ ಟಿ ದೇವೇಗೌಡ ಎಚ್ಚರಿಕೆ ನೀಡಿದರು.

Key words: GT Deve Gowda-visit- chamundi hills- devotees