ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಂಸದೆ ಸುಮಲತಾ ಅಂಬರೀಶ್.

ಮಂಡ್ಯ,ಜುಲೈ,5,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.jk

ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಹೆಚ್.ಡಿ ಕುಮಾರಸ್ವಾಮಿ ಹೇಳಿರೋದು ಸತ್ಯ.  ಮಂಢ್ಯದಲ್ಲಿ ನನ್ನಂತಹ ಸಂಸದೆ ನೋಡಿಲ್ಲ. ನೋಡೋದು ಇಲ್ಲ. ಏಕೆಂದರೇ ನಾನು ನೇರವಾಗಿ ಮಾತನಾಡುತ್ತೇನೆ. ನನ್ನ ನೇರ ನಡೆ ನುಡಿ ಅವರಿಗೆ ಇಷ್ಟವಾಗದಿದ್ದರೇ ನಾನೇನು ಮಾಡಲಿ. ನನ್ನ ಅಭಿಪ್ರಾಯ ನನ್ನದು ಅವರ ಅಭಿಪ್ರಾಯ ಅವರದ್ದು ಎಂದು  ಹೇಳಿದರು.

ಕೆಆರ್ ಎಸ್ ನಮ್ಮ ಜೀವನಾಡಿಯಾಗಿರುತ್ತದೆ.  ಕೆಆರ್ ಎಸ್ ಜಲಾಶಯ ಉಳಿಸುವುದು ನನ್ನ ಉದ್ದೇಶ. ಕೆಆರ್ ಎಸ್ ಡ್ಯಾಂ ಉಳಿಸುವ ಬಗ್ಗೆ ನನ್ನ ಹೇಳಿಕೆ ಕಾಳಜಿಯಿಂದ ಕೂಡಿದೆ.  ಸಂಸದೆಯಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಯಾರನ್ನು ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ. ನನ್ನ ಕೆಲಸವನ್ನ ಮಂಡ್ಯ ಜನತೆ ಮೆಚ್ಚಿದರೆ ಸಾಕು ಎಂದು ಹೆಚ್.ಡಿಕೆಗೆ ಸುಮಲತಾ ಅಂಬರೀಶ್  ಟಾಂಗ್ ನೀಡಿದರು.

ಅವರ ವ್ಯಕ್ತಿತ್ವ ಸಂಸ್ಕೃತಿ ಏನೆಂದು ತೋರಿಸುತ್ತದೆ.  ಕಳೆದ ಚುನಾವಣೆಯಲ್ಲಿ ಮಂಡ್ಯದ ಜನರು ಬುದ್ದಿ ಕಲಿಸಿದರು. ಮಂಡ್ಯಕ್ಕೆ ಯಾರು ಸೂಕ್ತ ಎಂದು ಜನರೇ ತೀರ್ಪು ನೀಡಿದ್ದಾರೆ. ಚುನಾವಣೆ ಸಂದರ್ಭದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನೆಂಬುದು ಜನರಿಗೂ ಗೊತ್ತಾಗಿದೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಕೆಆರ್ ಎಸ್ ಡ್ಯಾಮ್ ಬಿರುಕು ಬಿಟ್ಟಿದೆ  ಎಂಬ ಸಂಸದೆ ಸುಮಲತಾ  ಹೇಳಿಕೆ ಬಗ್ಗೆ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ,  .  ಕೆಆರ್ ಎಸ್ ಸೋರುತ್ತಿದ್ದರೇ ಸೋರದಂತೆ ಸುಮಲತರನ್ನ ಮಲಗಿಸಬೇಕು.  ಮಂಡ್ಯದಲ್ಲಿ ಬಹುಶಃ ಇಂತಹ ಸಂಸದರು ಬಂದಿಲ್ಲ ಬರೋದು ಇಲ್ಲ ಎಂದು ಹೇಳಿಕೆ ನೀಡಿದ್ದರು.

ENGLISH SUMMARY….

MP Sumalatha Ambareesh reacts on former CM HDK’s statement
Mandya, July 5, 2021 (www.justkannada.in): Mandya MP Sumalatha Ambareesh has reacted to former Chief Minister H.D. Kumaraswamy’s statement against her concerning the problem of crack appearing in the structure of the KRS reservoir.
“What H.D. Kumaraswamy has told is correct. Mandya has not seen a MP like me, nor they won’t see in the future. Because I am outspoken. What should I do if he doesn’t like it. My opinion is mine and his opinion is his,” she said.
“KRS is our lifeline. Saving the KRS reservoir is my objective. My statement regarding the reservoir is with concern. As a MP I am working honestly, I am not working to please anyone. If the people of Mandya like my work it is enough,” she added.
Keywords: Mandya MP/ Sumalatha Ambareesh/ Former CM H.D. Kumaraswamy/ KRS reservoir/ crack/ statement

Key words: MP -Sumalatha Ambarish – former CM HD kumaraswamy- statement