Friday, July 31, 2026

BDA Apartments

Home Front Page GST ಸುಧಾರಣೆಗಳ ಲಾಭ ಜನರಿಗೆ ಸಂಪೂರ್ಣವಾಗಿ ಸಿಗುವಂತೆ ನೋಡಿಕೊಳ್ಳಿ- ಸಂಸದ ಲಹರ್ ಸಿಂಗ್ ಸಿರೋಯಾ

GST ಸುಧಾರಣೆಗಳ ಲಾಭ ಜನರಿಗೆ ಸಂಪೂರ್ಣವಾಗಿ ಸಿಗುವಂತೆ ನೋಡಿಕೊಳ್ಳಿ- ಸಂಸದ ಲಹರ್ ಸಿಂಗ್ ಸಿರೋಯಾ

ಬೆಂಗಳೂರು,ಸೆಪ್ಟಂಬರ್,5,2025 (www.justkannada.in): ಕೇಂದ್ರ ಸರ್ಕಾರದ ಜಿಎಸ್ ಟಿ  ಸುಧಾರಣೆಗಳ ಲಾಭ ಜನರಿಗೆ ಸಂಪೂರ್ಣವಾಗಿ ಸಿಗುವಂತೆ ನೋಡಿಕೊಳ್ಳಬೇಕು, ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ಹೆಚ್ಚುವರಿ ಸುಂಕ ವಿಧಿಸಿದಂತೆ  ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ  ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಲಹರ್ ಸಿಂಗ್ ಸಿರೋಯಾ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು  ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಅನುಮೋದಿಸಿರುವ ಜಿ.ಎಸ್‌.ಟಿ ಸುಧಾರಣೆಗಳು, ರಾಜ್ಯದ ಜನರನ್ನು ಸಂಪೂರ್ಣವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಜನರಿಗೆ ಪ್ರಯೋಜನದಲ್ಲಿ ವ್ಯತ್ಯಯ ಉಂಟಾಗುವಂತೆ ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ತೆರಿಗೆಗಳನ್ನು ಚಾಲಾಕಿತನದಿಂದ ಹೇರಬಾರದು. ಜಿ.ಎಸ್.ಟಿ ಸುಧಾರಣೆಗಳು ರಾಜ್ಯದ ಆದಾಯ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಈಗಾಗಲೇ ಹೆಚ್ಚುವರಿ ತೆರಿಗೆ ಹೇರಲು ಪೂರಕ ವಾದ ಮಂಡಿಸುತ್ತಿರುವಂತೆ ತೋರುತ್ತಿದೆ. ಪ್ರತಿಯೊಬ್ಬ ನಾಗರಿಕ ಮತ್ತು ಗ್ರಾಹಕರಿಗೆ ಪ್ರಯೋಜನ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಜಿ.ಎಸ್‌.ಟಿ ಸುಧಾರಣೆಗಳನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು ಎಂದು ತಿಳಿಸಿದ್ದಾರೆ.

“ಆದಾಯ ನಷ್ಟ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆ ವಿಷಯವನ್ನು ಯಾವಾಗಲೂ ಎತ್ತುವ ರಾಜ್ಯ ಸರ್ಕಾರ, ತಮ್ಮ ಗ್ಯಾರಂಟಿ ಯೋಜನೆಗಳ ಹೊರೆಯು, ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಹೇಗೆ ಹಾಳು ಮಾಡಿದೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಈಗ ಜಿ.ಎಸ್‌.ಟಿ ಯಲ್ಲಿ ಸುಧಾರಣೆಗಳಾದಂತೆ, ರಾಜ್ಯ ಸರ್ಕಾರ ಕೂಡ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಸುಧಾರಣೆ ತರುವ ಬಗ್ಗೆ ಆಲೋಚಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಒಂದು ಕೈಯಿಂದ ಉದಾರವಾಗಿ ನೀಡಿದಂತೆ ಮಾಡಿ, ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದು, ಈಗಲಾದರೂ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ದ ಲಹರ್ ಸಿಂಗ್ ಸಿರೋಯಾ ಕಿಡಿಕಾರಿದ್ದಾರೆ.

Key words: benefits, GST, reforms, people, BJP, MP, Lahar Singh Siroya