Tuesday, September 29, 2026

BDA Apartments

ಬಿಜೆಪಿ ನಾಯಕ ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಎಂ.ಪಿ ಕುಮಾರಸ್ವಾಮಿ BDA ...
Home Front Page ಬಿಜೆಪಿ ನಾಯಕ ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಎಂ.ಪಿ ಕುಮಾರಸ್ವಾಮಿ.  

ಬಿಜೆಪಿ ನಾಯಕ ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಎಂ.ಪಿ ಕುಮಾರಸ್ವಾಮಿ.  

ಚಿಕ್ಕಮಗಳೂರು,ಮೇ,,15,2023(www.justkannada.in): ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಸಿ.ಟಿ. ರವಿ ಸೇರಿದಂತೆ ಹಾಲಿ ನಾಲ್ಕು ಶಾಸಕರನ್ನ ಕಾಂಗ್ರೆಸ್ ಸೋಲಿಸಿದೆ. ಈ ನಡುವೆ ಮತ್ತೊಂದೆಡೆ ಸಿ.ಟಿ.ರವಿ ಸೋಲಿನ ಬಗ್ಗೆ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂ.ಪಿ ಕುಮಾರಸ್ವಾಮಿ,  ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು. ಆದರೆ ಸಿ.ಟಿ.ರವಿಯನ್ನು ಕ್ಷೇತ್ರದಿಂದಲೇ ಜನ ಹೊರಕಳಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.ಬಿಜೆಪಿ ನಾಯಕ ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಎಂ.ಪಿ ಕುಮಾರಸ್ವಾಮಿ mp k...

ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದೇ ನಾನು. ಚಿಕ್ಕಮಗಳೂರಿನಲ್ಲಿ ವೀರಶೈವ-ಲಿಂಗಾಯತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸಿದರು. ಇನ್ಮುಂದೆ ಸಿ.ಟಿ.ರವಿಯ ಈ ವಿಚಾರಗಳು ಕೆಲಸ ಮಾಡುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್​​​ ಆಫ್ ಮಾಡಲಿಲ್ಲ. ಫೋನ್ ಸ್ವಿಚ್​​​ ಆಫ್ ಮಾಡಿದ್ದರೇ ಬಿಜೆಪಿಗೆ 50 ಸೀಟ್ ಅಷ್ಟೇ ಬರುತ್ತಿತ್ತು ಎಂದು ಕಿಡಿಕಾರಿದರು.

Key words: MP Kumaraswamy – BJP leade-r CT Ravi- defeat.