ನಾನು ಮತ್ತು ಅಣ್ಣ ಎಲ್ಲಾ ಆರೋಪಗಳಿಂದ ಮುಕ್ತವಾಗಿ ಹೊರ ಬರುತ್ತೇವೆ- ಸಂಸದ ಡಿ.ಕೆ ಸುರೇಶ್ ವಿಶ್ವಾಸ…

ನವದೆಹಲಿ,ಅ,3,2019(www.justkannada.in):  ನಾನು ಮತ್ತು ಅಣ್ಣ ಎಲ್ಲಾ ಆರೋಪಗಳಿಂದ ಮುಕ್ತವಾಗಿ ಹೊರ ಬರುತ್ತೇವೆ ಎಂದು ಸಂಸದ ಡಿ.ಕೆ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋದಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಹೀಗಾಗಿ ಇಂದು ನವದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಇಡಿ ತನಿಖೆಯಾದ್ರೂ ಮಾಡಲಿ ಸಿಬಿಐ ತನಿಖೆಯಾದ್ರೂ ಮಾಡಲಿ. ನಮ್ಮ ಬಳಿ ಸಮರ್ಪಕ ಉತ್ತರವಿದೆ. ಎಲ್ಲಾ ಆರೋಪಗಳಿಂದ ನಾನು ಮತ್ತು ಅಣ್ಣ ಮುಕ್ತವಾಗಿ ಹೊರಬರುತ್ತೇವೆ ಎಂದು ನುಡಿದರು.

ಇನ್ನು ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಪುತ್ರ ಐಶ್ವರ್ಯರನ್ನ ವಿಚಾರಣೆ ನಡೆಸಿದ್ದರು. ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ವಿಚಾರಣೆಗೊಳಪಟ್ಟಿದ್ದರು.

Key words:  MP-DK suresh-ed-hearing- newdehli-DK Shivakumar