ನೆರೆ ಪರಿಹಾರ ವಿಳಂಬ ಹಿನ್ನೆಲೆ: ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು…

ಚಿಕ್ಕಮಗಳೂರು,ಅ,3,2019(www.justkannada.in):  ನೆರೆ ಪರಿಹಾರ ವಿಳಂಬ ಹಿನ್ನೆಲೆ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರೈತ  ಚಂದ್ರೇಗೌಡ(55) ಮೃತಪಟ್ಟವರು. ಚಂದ್ರೇಗೌಡ 1 ಎಕರೆ ಗದ್ದೆ ತೋಟ ಹೊಂದಿದ್ದರು. ಈ ನಡುವೆ ಭಾರಿ ಮಳೆ ಪ್ರವಾಹದಿಂದಾಗಿ ಚಂದ್ರೇಗೌಡರ ಜಮೀನು ನೀರುಪಾಲಾಗಿತ್ತು.

ಹೀಗಾಗಿ ಜಮೀನು ಸರಿ ಮಾಡಲು ಚಂದ್ರೇಗೌಡರು ಸಾಲ ಮಾಡಿದ್ದರು. ಆದರೆ ಸರ್ಕಾರದಿಂದ ಪರಿಹಾರ ಸಿಗದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Key words: flood relief-farmer-commit- succide-chikkamagalore