Saturday, August 15, 2026

BDA Apartments

Home Front Page ಸಫಾರಿಗೆ ಹೋದ ಪ್ರವಾಸಿಗರಿಗೆ ಮುದ ನೀಡಿದ ಹುಲಿಗಳ ದರ್ಶನ: ವಿಡಿಯೋದಲ್ಲಿ ಸೆರೆಯಾಯ್ತು ಮರಿಗಳ ಜತೆ ತಾಯಿ...

ಸಫಾರಿಗೆ ಹೋದ ಪ್ರವಾಸಿಗರಿಗೆ ಮುದ ನೀಡಿದ ಹುಲಿಗಳ ದರ್ಶನ: ವಿಡಿಯೋದಲ್ಲಿ ಸೆರೆಯಾಯ್ತು ಮರಿಗಳ ಜತೆ ತಾಯಿ ಹುಲಿಯ ಆಟ…

ಮೈಸೂರು,ಜು,2,2019(www.justkannada.in): ತಾಯಿ ಹುಲಿ ತನ್ನ ಮರಿಗಳೊಂದಿಗೆ ಆಟವಾಡುತ್ತಿದ್ದ ದೃಶ್ಯ, ವೀಕೆಂಡ್ ನಲ್ಲಿ ಕಾಡಿನ ಸೌಂದರ್ಯ ನೋಡಲು ಬಂದ ಪ್ರವಾಸಿಗರ ಕ್ಯಾಮರಾದಲ್ಲಿ  ಸೆರೆಯಾಗಿದೆ.

ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದ ದಮ್ಮನಕಟ್ಟೆಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಎರಡು ಮರಿಗಳೊಂದಿಗೆ ತಾಯಿ ಹುಲಿ ದರ್ಶನ ನೀಡಿದೆ. ಸಫಾರಿ ಮಾರ್ಗದಲ್ಲಿ ಸಫಾರಿ ನಡೆಸುವವರಿಗೆ ಹುಲಿಗಳ ದರ್ಶನ ಕೊಟ್ಟಿದ್ದು, ತನ್ನ ಮರಿಗಳೊಂದಿಗೆ ತಾಯಿ ಹುಲಿ ಆಟವಾಡುತ್ತಿದ್ದ ದೃಶ್ಯವನ್ನ ಪ್ರವಾಸಿಗರು ನೋಡಿ ಕಣ್ತುಂಬಿಕೊಂಡರು.

ಪ್ರವಾಸಿಗರ ಕ್ಯಾಮರಾದಲ್ಲಿ ಹುಲಿಗಳು ಆಟವಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 20 ನಿಮಿಷಗಳ ಕಾಲ ಹುಲ್ಲು ಹಾಸಿನ ಮೇಲೆ ಹುಲಿ ಮರಿಗಳು ತಾಯಿಯೊಂದಿಗೆ ಆಟವಾಡುವ ಮೂಲಕ ವೀಕೆಂಡ್ ನಲ್ಲಿ ಕಾಡಿನ ಸೌಂದರ್ಯ ನೋಡಲು ಬಂದ ಪ್ರವಾಸಿಗರಿಗೆ ಮುದ ನೀಡಿದೆ.

Key words:  mother tiger- playing – her cubs – Nagarahole forest.