ಸೋಷಿಯಲ್ ಮೀಡಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ‘ಗೀತಾ’ ಟೀಸರ್ ಸದ್ದು !

ಬೆಂಗಳೂರು, ಜುಲೈ 02, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಸಾನ್ವಿ ಶ್ರೀವತ್ಸ, ಪ್ರಯಾಗ್ ಸೈಯದ್ ಸಲಾಂ ಹಾಗೂ ಶಿಲ್ಪ ಗಣೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಗೀತಾ. ನಿನ್ನೆ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ.

ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಪೇಜ್ ನಲ್ಲಿ ಬಿಡುಗಡೆಯಾಗಿರುವ ಗೀತಾ ಚಿತ್ರದ ಟೀಸರ್ ಸಖತ್ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಡೈಲಾಗ್ ಗಳು ಅಭಿಮಾನಿಗಳನ್ನು ಸೆಳೆಯುತ್ತಿವೆ.