Saturday, August 15, 2026

BDA Apartments

Home Front Page ಕೊನೆ ದಿನದ ವಿಧಾನಸಭೆ ಕಲಾಪಕ್ಕೆ ಅರ್ಧಕ್ಕಿಂತ ಹೆಚ್ಚು ಶಾಸಕರು ಗೈರು..

ಕೊನೆ ದಿನದ ವಿಧಾನಸಭೆ ಕಲಾಪಕ್ಕೆ ಅರ್ಧಕ್ಕಿಂತ ಹೆಚ್ಚು ಶಾಸಕರು ಗೈರು..

ಬೆಂಗಳೂರು,ಅ,12,2019(www.justkannada.in): ವಿಧಾನಮಂಡಲ ಅಧಿವೇಶನದ ಕೊನೆಯ ದಿನದ ವಿಧಾನಸಭೆ ಕಲಾಪಕ್ಕೆ  ಬಹುತೇಕ ಶಾಸಕರು ಗೈರಾಗಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನ ಕಲಾಪ ಇಂದು ಮುಕ್ತಾಯಗೊಳ್ಳಲಿದೆ. ಈ ನಡುವೆ ಅಧಿವೇಶನ ಅವಧಿ ಹೆಚ್ಚು ಮಾಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ಆದರೆ  ಇಂದಿನ ಕಲಾಪಕ್ಕೆ ಅರ್ಧಕ್ಕಿಂದಲೂ ಹೆಚ್ಚು ಶಾಸಕರು ಗೈರಾಗಿದ್ದಾರೆ.

ಸದನದಲ್ಲಿ ಆಡಳಿತ ಪಕ್ಷ ಬಿಜೆಪಿಯ 53 ಶಾಸಕರು, ಕಾಂಗ್ರೆಸ್ ನ 20 ಶಾಸಕರು ಮತ್ತು ಜೆಡಿಎಸ್ ನ 7 ಶಾಸಕರು  ಸೇರಿ 80 ಸದಸ್ಯರು ಮಾತ್ರ ಹಾಜರಿದ್ದಾರೆ ಎನ್ನಲಾಗಿದೆ. ಇನ್ನು ಶಾಸಕರು ನಿನ್ನೆಯೇ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇಂದು ಸಚಿವಾಲಯದ ಸಿಬ್ಬಂದಿಗಳಿಗೆ ರಜೆ ಇದ್ದರೂ  ಸಿಬ್ಬಂದಿಗಳನ್ನ ಸರ್ಕಾರ ಕರೆಸಿಕೊಂಡಿದೆ. ಆದರೆ ಇತ್ತ ಶಾಸಕರು ಮಾತ್ರ ಸದನಕ್ಕೆ ಬಾರದೆ ಗೈರಾಗಿದ್ದಾರೆ.

Key words: More than-MLAs- absent – last day- assembly- session