ಬೆಂಗಳೂರಿನ 20ಕ್ಕೂ ಹೆಚ್ಚು ಕಡೆ ಮತ್ತೆ NIA ದಾಳಿ, ಪರಿಶೀಲನೆ.

ಬೆಂಗಳೂರು, ಡಿಸೆಂಬರ್,18,2023(www.justkannada.in): ಇತ್ತೀಚೆಗೆ ಬೆಂಗಳೂರಿನ ವಿವಿಧೆಡೆ ದಾಳಿ ನಡೆಸಿದ್ದ ಎನ್ ಐಎ(ರಾಷ್ಟ್ರೀಯ ತನಖಾ ದಳ) ಇದೀಗ ಮತ್ತೆ ನಗರದ  20ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಎನ್ ಐಎ ದಾಳಿ ನಡೆಸಿ ಶಂಕಿತ ಉಗ್ರ ಅಲಿ ಅಬ್ಬಾಸ್​ನನ್ನು ಬಂಧಿಸಿತ್ತು. ಇದೀಗ ಮತ್ತೆ ಎನ್ ​ಐಎ ಅಧಿಕಾರಿಗಳು ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್​.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ  ನಡೆಸಿದ್ದಾರೆ.

ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕ ಶಂಕೆ ಹಿನ್ನೆಲೆ ಡಿಸೆಂಬರ್ 9 ರಂದು ಪುಲಿಕೇಶಿನಗರದಲ್ಲಿರುವ ಮೋರ್ ರಸ್ತೆಯ ಅಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್​ಐಎ, 16 ಲಕ್ಷಕ್ಕೂ ಹೆಚ್ಚು ನಗದು ಹಾಗೂ ಲ್ಯಾಪ್ ಟಾಪ್, ಪೆನ್ ಡ್ರೈವ್ ಜಪ್ತಿ ಮಾಡಿದ್ದರು. ಅದರಂತೆ ಅಲಿ ಅಬ್ಬಾಸ್ ಮೊಬೈಲ್, ಲ್ಯಾಪ್ ಟಾಪ್ ರಿಟ್ರೀವ್ ಮಾಡಲಾಗಿತ್ತು. ಈ ವೇಳೆ ಮಹತ್ವದ ಮಾಹಿತಿ ಕಲೆ ಹಾಕಿದ್ದ ಎನ್​ಐಎ ಅಧಿಕಾರಿಗಳು, ಇಂದು ಮತ್ತೆ ನಗರದ ಹಲವೆಡೆ ದಾಳಿ ನಡೆಸಿದ್ದಾರೆ.

Key words: More than- 20 places – Bengaluru- raided – NIA