Monday, October 5, 2026

BDA Apartments

ವಿನೂತನ ಪ್ರಯತ್ನ: ಮೈಸೂರಿನಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ… BDA JK_Adv BDA Adv
Home Front Page ಮೈಸೂರಿನಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ

ಮೈಸೂರಿನಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ

ಮೈಸೂರು, ಅಕ್ಟೋಬರ್,5,2026(www.justkannada.in): ಮೈಸೂರಿನಲ್ಲಿ ಬರ ಪರಿಸ್ಥಿತಿಯ ಬಗ್ಗೆ  ಕೇಂದ್ರ ಬರ ಅಧ್ಯಯನ ತಂಡವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ  ಉಪ ಆಯುಕ್ತ ಸುಧಾಮ್ ಬೇಗ್,  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (MNCFC)ದ ಉಪನಿರ್ದೇಶಕ ಕರಣ್ ಚೌಧರಿ ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ    ಜಿಲ್ಲೆಯಲ್ಲಿ  ಬರ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.Drought situation baraparihara

ಈ ಸಂಬಂಧ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ ಅವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರತರ ಬರ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿರುತ್ತದೆ ಹಾಗೂ ಶೇ 59 ರಷ್ಟು ಮಳೆ ಕೊರತೆಯಾಗಿರುತ್ತದೆ ಎಂದರು.

ಕೆ.ಆರ್.ಎಸ್, ಕಬಿನಿ ಹಾಗೂ‌‌ ಹಾರಂಗಿ ಮುಖ್ಯವಾಗಿ 3 ಜಲಾಶಯಗಳಿದ್ದು  ಕೆ.ಆರ್.ಎಸ್ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ 17.86  ಟಿಎಂಸಿ ಇದ್ದು, ಕಳೆದ ಬಾರಿ 21.83 ಟಿಎಂಸಿ ಇತ್ತು. 5ಟಿಎಂಸಿ ಕೊರತೆಯಾಗಿದೆ. ಇದೇ ರೀತಿ ಕಬಿನಿ ಜಲಾಶಯದಲ್ಲಿ ಈ ಬಾರಿ ಲೈವ್ ಕ್ಯಪಾಸಿಟಿ 1.31 ಟಿಎಂಸಿ ಇದ್ದು, ಕಳೆದ ಬಾರಿ 8.71ಟಿಎಂಸಿ ಇರುತ್ತದೆ. 7 ಟಿಎಂಸಿ ಕೊರತೆಯಾಗಿರುತ್ತದೆ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗಾಗಿ ಹಾಗೂ ಕೆರೆ ತುಂಬಿಸಲು ಮಾತ್ರ ಬಳಸಲಾಗುತ್ತಿದೆ.ಮಳೆಯ ಅಭಾವ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿಗೂ ಸಹ ತೀವ್ರ ತೊಂದರೆ ಎದುರಾಗುವ ಪರಿಸ್ಥಿತಿ ಇರುತ್ತದೆ ಎಂದು ವಿವರಿಸಿದರು.Drought situation dc

ಜಂಟಿ ಕೃಷಿ ನಿರ್ದೇಶಕ‌ಕೆ.ಹೆಚ್ ರವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಬರದಿಂದ ಸುಮಾರು 143308 ನಷ್ಟು ಬೆಳೆ ನಾಶವಾಗಿದ್ದು, ಎಸ್.ಡಿ.ಆರ್ ಎಫ್ ನಿಯಮದ ಪ್ರಕಾರ ಸುಮಾರು 122.34 ಕೋಟಿ ರೂ ಹಣ ನಷ್ಠವಾಗಿರುತ್ತದೆ ಎಂದು ಮಾಹಿತಿ ನೀಡಿದರು.Mysuru jk02_new jk02 new

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯಾ ಆರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

English Summary
Title

Mysuru Drought Assessment: Central Team Inspects Severe Crop Damage

Short Description
The Inter-Ministerial Central Drought Study Team is inspecting the Mysuru region to assess severe agricultural damages and water distress following a massive 55% rainfall deficit. High-level officials are evaluating drought-hit villages in Saligrama taluk, checking withered ragi and tobacco fields, and reviewing critical water levels at the Kabini Dam. With eight Mysuru taluks officially declared severely drought-affected, the team's field report will determine crucial financial relief from the National Disaster Response Fund (NDRF) to aid distressed farmers and combat regional drinking water shortages
Keywords
Drought situation, Mysuru, Central drought study team, nformation