Sunday, August 23, 2026

BDA Apartments

Home Front Page ಇಂದು ಸಂಜೆ ಮೋದಿ ಸಂಪುಟ ಪುನಾರಚನೆ: ರಾಜ್ಯದ ಯಾವ ಸಂಸದರಿಗೆ ಮಂತ್ರಿಗಿರಿ ಭಾಗ್ಯ?!

ಇಂದು ಸಂಜೆ ಮೋದಿ ಸಂಪುಟ ಪುನಾರಚನೆ: ರಾಜ್ಯದ ಯಾವ ಸಂಸದರಿಗೆ ಮಂತ್ರಿಗಿರಿ ಭಾಗ್ಯ?!

ಬೆಂಗಳೂರು, ಜುಲೈ 07, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಚಿವ ಸಂಪುಟ ಪುನಾರಚನೆ ಮಾಡಲಿದ್ದಾರೆ.

ಹಿಂದುಳಿದ ವರ್ಗದವರು, ಯುವ ತಂತ್ರಜ್ಞರು, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜತೆಗೆ ರಾಜ್ಯದ ಇಬ್ಬರು ಸಂಸದರಿಗೆ ಮಂತ್ರಿ ಭಾಗ್ಯ ಸಿಗುವ ನಿರೀಕ್ಷೆ ಇದೆ.

ಸುರೇಶ್‌ ಅಂಗಡಿ ನಿಧನ ಹೊಂದಿ ತೆರವಾಗಿದ್ದ ಸ್ಥಾನದ ಜತೆಗೆ ಇನ್ನೊಂದು ಸ್ಥಾನ ಸಿಗಲಿದೆ ಎನ್ನಲಾಗಿದೆ.

ಸದ್ಯ 28 ಸಚಿವ ಸ್ಥಾನಗಳು ಖಾಲಿ ಇದ್ದು, ಇದರಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ತುಂಬುವ ಸಾಧ್ಯತೆ ಇದೆ. ಸರಿಯಾಗಿ ನಿರ್ವಹಣೆ ತೋರದ 6ರಿಂದ 7 ಸಚಿವರನ್ನು ಕೈಬಿಡುವ ಸಾಧ್ಯತೆಯೂ ಇದೆ.

ಇಂದು ಸಂಜೆ 5.30ರಿಂದ 6ರ ನಡುವೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.