ಬಾಕ್ಸ್ ಆಫೀಸ್’ನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ವಾರ್?: ಅಲ್ಲು ಅರ್ಜುನ್ ವರ್ಸಸ್ ರಾಕಿ ಭಾಯ್ !

ಬೆಂಗಳೂರು, ಜುಲೈ 07, 2021 (www.justkannada.in): ಪ್ಯಾನ್​ ಇಂಡಿಯಾ ಸ್ಟಾರ್​ಗಳಾದ ಯಶ್​-ಅಲ್ಲು ಅರ್ಜುನ್ ಚಿತ್ರಗಳು ಒಟ್ಟಿಗೆ ಪೈಪೋಟಿಗೆ ಇಳಿಯಲಿವೆಯೇ?​ ಇಂತಹದೊಂದು ಪ್ರಶ್ನೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೌದು. ‘ಕೆಜಿಎಫ್​: ಚಾಪ್ಟರ್​ 2’ ಮತ್ತು ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಚಿತ್ರಗಳು ರಿಲೀಸ್​ ದಿನಾಂಕಕ್ಕಾಗಿ ಹಣಾಹಣಿ ನಡೆಸುವ ಸಾಧ್ಯತೆ ಇದೆ.

ಕೊವಿಡ್​ ಎರಡನೇ ಅಲೆಯ ಕಾರಣ ಚಿತ್ರಮಂದಿರಗಳು ತೆರೆಯದೇ ಇರುವುದರಿಂದ ಎರಡೂ ಚಿತ್ರಗಳ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ.

ಒಂದೇ ಸಮಯಕ್ಕೆ ‘ಪುಷ್ಪ’ ಮತ್ತು ‘ಕೆಜಿಎಫ್​ 2’ ಚಿತ್ರಗಳು ಬಿಡುಗಡೆಯಾದರೆ ಖಂಡಿತವಾಗಿಯೂ ಬಾಕ್ಸ್​ಆಫೀಸ್​ ಕ್ಲ್ಯಾಶ್​ ಆಗಲಿದೆ ಎನ್ನಲಾಗುತ್ತಿದೆ.