ಬಂಡೀಪುರದಲ್ಲಿ ಮೋದಿ ಸಫಾರಿ: ಹುಲಿ ದರ್ಶನ

ಮೈಸೂರು, ಏಪ್ರಿಲ್ 09, 2023 (www.justkannada.in): ಬಂಡಿಪುರದಲ್ಲಿ ಸಫಾರಿಗೆ ಪ್ರಧಾನಿ ಮೋದಿ ಎರಡು ಗಂಟೆಗಳ ಕಾಲ ಸುಮಾರು 22 ಕಿ.ಮೀ ಸಫಾರಿ ಮಾಡಿದರು.
ಬಂಡಿಪುರದ ಬೋಳುಗುಡ್ಡದಿಂದ ಸಫಾರಿಗೆ ಆರಂಭವಾಯಿತು. ಮಾರ್ಗಮಧ್ಯೆ ಮಳ್ಳಾಳ ಕಳ್ಳಬೇಟೆ ಕ್ಯಾಂಪ್ ಬಳಿ ಕೊಂಚ ವಿರಾಮ ತೆಗೆದುಕೊಂಡರು.

ಸೋಲಿಗರ ಕೈಯಲ್ಲಿ ತಯಾರಿಸಿದ ಗ್ರೀನ್ ಟೀ ಸವಿದ ಮೋದಿ ಅವರಿಗೆ ಸಫಾರಿ ವೇಳೆ ಮೋದಿಗೆ ಹುಲಿ ದರ್ಶನವಾಯಿತು. ಬರೋಬ್ಬರಿ 22 ಕಿಮೀ ಅನ್ನು ಮೋದಿ ಅವರು ಸಫಾರಿ ವಾಹನದಲ್ಲಿ ಕ್ರಮಿಸಿದರು.

ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ಸಫಾರಿ ವಾಹನದಿಂದ ಇಳಿದು ಸರ್ಕಾರಿ ವಾಹನದಲ್ಲಿ ರಸ್ತೆ ಮೂಲಕ ಮಧುಮಲೈ ಫಾರೆಸ್ಟ್ ಗೆ ಪಯಣ ಬೆಳೆಸಿದರು.

ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ
ಅನಾಥ ಆನೆ ಮರಿ ಸಾಕಿ ಬೆಳೆಸಿದ
ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಗಳ ಭೇಟಿ ಮಾಡಿ ಸನ್ಮಾನಿಸಿದರು.