ಸಿಎಂ ಬೊಮ್ಮಾಯಿ ಅವರೇ ಮೋದಿ ಭೇಟಿಯ ಖರ್ಚನ್ನ ಕೇಂದ್ರ ಸರ್ಕಾರವೇ ಭರಿಸಲು ಹೇಳಿ-ರಾಜ್ಯ ಕಾಂಗ್ರೆಸ್ ಟಾಂಗ್.

ಬೆಂಗಳೂರು,ಏಪ್ರಿಲ್,8,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪದೇ ಪದೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳುತ್ತಿರುವ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,  ಮೋದಿಯ ಶಿವಮೊಗ್ಗ ಕಾರ್ಯಕ್ರಮದ ಖರ್ಚು – 25 ಕೋಟಿ, ಧಾರವಾಡ ಕಾರ್ಯಕ್ರಮ – 9 ಕೋಟಿ, ಮೋದಿಯ ಪ್ರತಿ ಭೇಟಿಯ ಖರ್ಚು ಸರಾಸರಿ 15 ಕೋಟಿ. ಚುನಾವಣೆ ಮುಗಿಯುವುದರಲ್ಲಿ ₹1000 ಕೋಟಿ ಬೊಕ್ಕಸಕ್ಕೆ ಹೊರೆಯಾದರೂ ಅಚ್ಚರಿ ಇಲ್ಲ. ಸಿಎಂ ಬೊಮ್ಮಾಯಿ ಅವರೇ, ಮೋದಿ ಭೇಟಿಯ ಖರ್ಚುನ್ನು ಕೇಂದ್ರ ಸರ್ಕಾರವೇ ಭರಿಸಲು ಹೇಳಿ, ಅಥವಾ ಅದಾನಿ, ಅಂಬಾನಿಯಾದರೂ ಭರಿಸಲಿ ಎಂದು ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಂಡಿದ್ದು ನಾಳೆ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ನಡೆಸಲಿದ್ದಾರೆ. ನಂತರ ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡೀಪುರ ಹುಲಿ ಯೋಜನೆ 50 ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ, ಇತ್ತೀಚಿನ ಹುಲಿಗಣತಿ ವರದಿ, ಹುಲಿಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ, ನಾಣ್ಯ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ.

Key words: CM Bommai- central government – cost – Modi’s- visit – Congress