ಪೊಲೀಸರ ಬಲವರ್ಧನೆಗೆ ಮೋದಿ ಸರ್ಕಾರ ನಿರ್ಧಾರ – ಕೇಂದ್ರ ಗೃಹ ಸಚಿವ ಅಮಿತ್ ಶಾ.

ಬೆಂಗಳೂರು,ಡಿಸೆಂಬರ್,31,2022(www.justkannada.in): ಪೊಲೀಸರ ಬಲವರ್ಧನೆಗೆ  ಪ್ರಧಾನಿ ಮೋದಿ ಸರ್ಕಾರ ನಿರ್ಧಾರ ಮಾಡಿದೆ. ಪೊಲೀಸ್ ವ್ಯವಸ್ಥೆ ಸುಧಾರಣೆಗೆ ನಿರಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದೇವನಹಳ್ಳಿಯಲ್ಲಿ ಐಟಿಪಿಬಿ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ,  ಕೇಂದ್ರ ಗುಪ್ತಚರ ಸಂಸ್ಥೆಗೆ ಭೂಮಿ ಪೂಜೆ ಮಾಡಲಾಗಿದೆ. ಸಿಎಂ ಬೊಮ್ಮಾಯಿಗೆ ಧನ್ಯವಾದ ಅರ್ಪಿಸುತ್ತೇನೆ. ಕೇಂದ್ರ ಸರ್ಕಾರದಿಂದ 2 ಉತ್ತಮ ಯೋಜನೆಗಳು ಆರಂಭವಾಗಿದೆ. ಬಿಪಿಆರ್ ಎನ್ ಡಿ ಪೊಲೀಸ್ ವ್ಯವಸ್ಥೆಗೆ ಬಲ ನೀಡುವ ಸಂಸ್ಥೆ. ಬಿಪಿಆರ್ ಎನ್ ಡಿಗೆ ಸಿಗಬೇಕಿದ್ದ ಯಶಸ್ಸು ಸರಿಯಾಗಿ ಸಿಗಲಿಲ್ಲ.  ಬದಲಾವಣೆಯನ್ನ ಸ್ವೀಕರಿಸಿ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಪೊಲೀಸರ ಬಲವರ್ದನೆಗೆ ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎಂದರು.

ಪೊಲೀಸ್ ವ್ಯವಸ್ಥೆ ಸುಧಾರಣೆಗೆ ನಿರಂತರ ಕ್ರಮ ಕ್ರಮ ಕೈಗೊಳ್ಳಲಾಗುತ್ತದೆ.  ರಣನೀತಿ ರೂಪಿಸುವುದು ಕೂಡ ಕೆಲಸ. ಸವಾಲುಗಳನ್ನ ಎದುರಿಸುವ ಸ್ಥೈರ್ಯವನ್ನ ಪೊಲೀಸರಿಗೆ ನೀಡಬೇಕು.  ಭಾರತದಲ್ಲಿ ಅಲ್ಲಿನ ಸಂಸ್ಕೃತಿ ಮೇಲೆ ಕಾನೂನು ರೂಪಿಸಬೇಕು.  ಉಗ್ರ ಕೃತ್ಯ ಡ್ರಗ್ಸ್ ಕಿತ್ತೊಗೆಯುವ ಕೆಲಸ ಮಾಡಬೇಕು ಎಂದು ಅಮಿತ್ ಶಾ ಹೇಳಿದರು.

Key words: Modi government- decision – strengthen – police-Union Home Minister- Amit Shah.