ಅಮಿತ್ ಶಾ ಭಾರತದ 2ನೇ ವಲ್ಲಭಾಯ್ ಪಟೇಲ್- ಡಿಕೆ ಶಿವಕುಮಾರ್ ಗೆ ಕೆ.ಎಸ್ ಈಶ್ವರಪ್ಪ ಟಾಂಗ್.

ಶಿವಮೊಗ್ಗ,ಡಿಸೆಂಬರ್,31,2022(www.justkannada.in):   ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವೇಶ ಟೀಕಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ. ಅಮಿತ್ ಶಾ ಬಂದರೇ ಮಂಡ್ಯ ಅಭಿವೃದ್ದಿಯಾಗುತ್ತಾ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ಹಾಗಾದರೇ ರಾಹುಲ್ ಗಾಂಧಿ ಯಾತ್ರೆಯಿಂಧ ಭಾರತ್ ಜೋಡಣೆಯಾಗುತ್ತಾ..?  ಅಮಿತ್ ಶಾ ಭಾರತದ 2ನೇ ವಲ್ಲಭಾಯ್ ಪಟೇಲ್.  ಅಮಿತ್ ಶಾ ಗೃಹ ಸಚಿವರಾದ ಬಳಿಕ ಭಯೋತ್ಪಾದನೆ ನಿಯಂತ್ರಣ ವಾಗಿದೆ ಎಂದು ಟಾಂಗ್ ನೀಡಿದರು.

ಪಂಚಮಸಾಲಿ 2ಎಗೆ ಸೇರಿಸಿದ್ರೆ ಉಳಿದ 103 ಹಿಂದುಳಿದ ಜಾತಿಗೆ ಅನ್ಯಾಯ: ನನ್ನ ಅಭಿಪ್ರಾಯ ಕೂಡ ಇದೇ ಆಗಿತ್ತು.

ಪಂಚಮಸಾಲಿಗೆ 2ಎ ಮೀಸಲಾತಿಯನ್ನ ನೀಡಿದರೇ ಉಳಿದ 103 ಹಿಂದುಳಿದ ಜಾತಿಗೆ ಅನ್ಯಾಯವಾಗುತ್ತದೆ.  ನನ್ನ ಅಭಿಪ್ರಾಯ ಕೂಡ ಇದೇ ಆಗಿತ್ತು. ಸಾಕಷ್ಟು ಚರ್ಚೆ ಮಾಡಿ ಇದೀಗ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೆ  ಎಷ್ಟು ಮೀಸಲಾತಿ ನೀಡಬಹುದು  ಬೇರೆ ಕಡೆಯಿಂದ ಎಷ್ಟು ಮೀಸಲು ತರಬಹುದು ಎಂದು ಚರ್ಚೆಯಾಗಲಿದೆ.  ಇದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಹಕಾರ ನೀಡಬೇಕು ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: Amit Shah – India’s- 2nd Vallabhai Patel- KS Eshwarappa