ಜಗತ್ತೇ ಮೆಚ್ಚುವ ರೀತಿಯಲ್ಲಿ ಮೋದಿ, ಅಮಿತ್ ಶಾ ಆಡಳಿತ: ಇಬ್ಬರ ಪರಿಶ್ರಮಕ್ಕೆ ಸಾಟಿಯಿಲ್ಲ- ಮಾಜಿ ಸಿಎಂ ಬಿಎಸ್ ವೈ ಗುಣಗಾನ.

ದಕ್ಷಿಣ ಕನ್ನಡ,ಫೆಬ್ರವರಿ,11,2023(www.justkannada.in): ಜಗತ್ತೇ ಮೆಚ್ಚುವ ರೀತಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ  ಅಮಿತ್ ಶಾ ಆಡಳಿತ ನಡೆಸುತ್ತಿದ್ದಾರೆ. ಜಗತ್ತಿನ ಯಾವ ಶಕ್ತಿಯೂ ಇವರಿಬ್ಬರ ಪರಿಶ್ರಮಕ್ಕೆ ಸಾಟಿಯಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗುಣಗಾನ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸ್ವಾಮಿ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್  ಯಡಿಯೂರಪ್ಪ,  ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿ, ಅಮಿತ್ ಶಾ ಪರಿಹಾರ ಕಲ್ಪಿಸಿದ್ದಾರೆ.  ದೇಶವನ್ನಅಭಿವೃದ್ದಿ ಮಾಡುವಲ್ಲಿ ಇಬ್ಬರ ಕೊಡುಗೆ ಅಪಾರ. ಇಡೀ ವಿಶ್ವವೇ ಮೆಚ್ಚುವಂತ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ.  ಮೋದಿ ಅಮಿತ್ ಶಾ ಪರಿಶ್ರಮಕ್ಕೆ ಸಾಟಿಯಿಲ್ಲ ಎಂದರು.

ಕ್ಯಾಂಪ್ಕೋ  ಒಂದು ಪರಿಸರ ಸ್ನೇಹಿ ಸಂಸ್ಥೆ . ಲಕ್ಷಾಂತರ ರೈತರು ಕಾರ್ಮಿಕರಿಗೆ ಈ ಸಂಸ್ಥೆ ನೆಲೆ ಒದಗಿಸಿದೆ ಎಂದು ಬಿಎಸ್ ವೈ ತಿಳಿಸಿದರು.

Key words: Modi – Amit Shah- praise-Former CM -BS Yeddyurappa