ಟಿಪ್ಪು ಆರಾಧನೆ ಮಾಡುವ ಕಾಂಗ್ರೆಸ್ ಜೆಡಿಎಸ್ ಗೆ ಮತ ಹಾಕಬೇಡಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಬರಲು ಸಂಕಲ್ಪ ಮಾಡಿ-ಅಮಿತ್ ಶಾ ಕರೆ.

ದಕ್ಷಿಣ ಕನ್ನಡ,ಫೆಬ್ರವರಿ,11,2023(www.justkannada.in): ಟಿಪ್ಪು ಆರಾಧನೆ ಮಾಡುವ ಕಾಂಗ್ರೆಸ್ ಜೆಡಿಎಸ್ ಗೆ ಮತ ಹಾಕಬೇಡಿ. ರಾಜ್ಯ ಸುರಕ್ಷಿತವಾಗಿರಬೇಕಾದರೇ ಬಿಜೆಪಿಗೆ ಮತ ನೀಡಿ.  ರಾಜ್ಯದಲ್ಲಿ ಮತ್ತೆ ಬಿಜೆಪಿ ಬರಲು ಸಂಕಲ್ಪ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸ್ವಾಮಿ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಕೃಷಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಕಾಂತಾರ  ಸಿನಿಮಾ ನೋಡಿದ್ದೇನೆ. ನೋಡಿದ ಬಳಿಕ ಸಮೃದ್ದ ಪರಂಪರೆ ಬಗ್ಗೆ ಗೊತ್ತಾಯಿತು. ಮಂಗಳೂರಿನ ಅಡಿಕೆ ತಿಂದು ನಾವು ನಿಮ್ಮನ್ನ ಸ್ಮರಿಸಿಕೊಳ್ಳುತ್ತೇವೆ. ಗುಜರಾತಿನ ಬಹಳಷ್ಟು ಮಂದಿ ಮಂಗಳೂರಿನ ಅಡಿಕೆ ತಿಂತಾರೆ. ಮಂಗಳೂರು ಪವಿತ್ರವಾದ ಭೂಮಿ  ಎಂದರು.

ಇಂದು ಕ್ಯಾಂಪ್ಕೋ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಸುಭದ್ರವಾಗಿದೆ. ಕೇಂದ್ರ ಸರ್ಕಾರ ರೈತರ ಹಿತ ಕಾಯುತ್ತದೆ .ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.   ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ. ದೇಶಾದ್ಯಂತ ಪಿಎಫ್ ಐ ಬ್ಯಾನ್ ಮಾಡಿದ್ದೇವೆ. ಇದೀಗ ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ. ಭಯೋತ್ಪಾದನೆ ನಕ್ಸಲಿಸಂ ಮಟ್ಟ ಹಾಕಿದ್ದೇವೆ.  ದೇಶ ವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತೆ. ಟಿಪ್ಪು ಆರಾಧನೆ ಮಾಡುವ ಕಾಂಗ್ರೆಸ್ ಜೆಡಿಎಸ್ ಗೆ ಮತ ನೀಡಬೇಡಿ. ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಬಿಜೆಪಿ ಗೆಲ್ಲಿಸೋಣ ಎಂದು ಅಮಿತ್ ಶಾ ನುಡಿದರು.

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ, ಸಚಿವರಾದ ಅರಗ ಜ್ಞಾನೇಂದ್ರ, ಎಸ್ ಟಿ ಸೋಮಶೇಖರ್, ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಉಪಸ್ಥಿತರಿದ್ದರು.

Key words: Resolve -BJP – state-Home minister- Amit Shah.