ಕಾಂಗ್ರೆಸ್ ಪರ ಇರುವ ಮತದಾರರ ಹೆಸರು ಡಿಲಿಟ್ ಮಾಡುವ ಕೆಲಸವಾಗುತ್ತಿದೆ-ಶಾಸಕ ಪ್ರಿಯಾಂಕ್ ಖರ್ಗೆ ಆರೋಪ.

ಕಲಬುರಗಿ,ಫೆಬ್ರವರಿ,11,2023(www.justkannada.in): ಕಾಂಗ್ರೆಸ್​ ಪರ ಇರುವ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ. ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಕಲ್ಬುರ್ಗಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಮತದಾರರ ಹೆಸರು ಡಿಲಿಟ್ ಮಾಡಲು ರಿಕ್ವೆಸ್ಟ್ ಕಳಿಸಲಾಗುತ್ತಿದೆ. ಮೊಬೈಲ್ ನಂಬರ್​​ನಿಂದ ಬಿಹಾರ , ರಾಜಸ್ಥಾನ , ಗುಜರಾತ್​​ ಮೂಲದ ವ್ಯಕ್ತಿಗಳಿಂದ ರಿಕ್ವೆಸ್ಟ್​​ ಕಳುಹಿಸಲಾಗುತ್ತಿದೆ . ಇದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರುವ ಬಗ್ಗೆ ಅನುಮಾನವಿದ್ದು, ಈ ಹಿಂದೆ ಬೆಂಗಳೂರಲ್ಲಿ ಚಿಲುಮೆ ಸಂಸ್ಥೆ ಇದೇ ರೀತಿ ಕೆಲಸ ಮಾಡಿತ್ತು . ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ ಕೈವಾಡವಿದೆ . ಬಿಜೆಪಿ ಸೋಲಿನ ಭಯದಿಂದ ಈ ರೀತಿ ವಾಮಮಾರ್ಗ ಅನುಸರಿಸುತ್ತಿದೆ . ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದರು.

ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಪ್ರಧಾನಿ ಮೋದಿಗೆ ಮತ್ತೊಮ್ಮೆ ರಾಜ್ಯಕ್ಕೆ ಬನ್ನಿ ಎಂದು ಬಿಜೆಪಿ ನಾಯಕರು ಮನವಿ ಮಾಡ್ತಿದ್ದಾರೆ. ಮೊದಲು ಬಿಜೆಪಿ ನಾಯಕರು ತಮ್ಮ ಮನೆಯನ್ನು ಸರಿಮಾಡಿಕೊಳ್ಳಲಿ. ಎಲ್ಲರೂ ಗೆಲ್ಲುವುದಕ್ಕೆ ಚುನಾವಣೆಯಲ್ಲಿ ಕಣಕ್ಕಿಳಿಯುವುದು, ಸೋಲು ಗೆಲುವಿನ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: Deletion – names -voters – Congress-favor-MLA-Priyank Kharge