ಪಾಕಿಸ್ತಾನಕ್ಕೆ ಜೈ ಎಂದವರಿಗೆ ಗುಂಡಿಕ್ಕಿ: ವಿಧಾನ ಪರಿಷತ್‌ ಸದಸ್ಯ ವಿಶ್ವನಾಥ್.‌

Those who say 'Jai Pakistan' will be shot dead: MLC Vishwanath. Those who said 'Jai Pakistan' should have been shot dead. Some of the boys eat the rice here and say, 'Jai to Pakistan'. Those who live in our country and say 'Jai to Pakistan' are traitors. A new law should be enacted in this regard.

ಮೈಸೂರು, ಮೇ೦೧,೨೦೨೫: ಪಾಕಿಸ್ತಾನಕ್ಕೆ ಜೈ ಎಂದವರಿಗೆ ಗುಂಡಿಕ್ಕಿ ಕೊಲ್ಲಬೇಕಾಗಿತ್ತು. ಕೆಲವು ಹುಡುಗರು ಇಲ್ಲಿನ ಅನ್ನ ತಿಂದು, ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಅನ್ನೋರು ದೇಶದ್ರೋಹಿಗಳು. ಈ ಬಗ್ಗೆ ಹೊಸ ಕಾನೂನನ್ನು ಕೈಗೊಳ್ಳಬೇಕು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್ ಹೇಳಿದಿಷ್ಟು..

ಪಹಲ್ಗಾಮ್ ಉಗ್ರರ ದಾಳಿ ವಿಚಾರ ಪ್ರಸ್ತಾಪಿಸಿ, ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಇದೆ. 1971 ರಲ್ಲಿ ಇಂದಿರಾಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದರು. ಅದೇ ಕೆಲಸ ಈಗಲೂ ನಮೋ ಮೂಲಕ ಅಗಬೇಕು. ಆ ಸಂದರ್ಭದಲ್ಲಿ ಇಡೀ ದೇಶ ಅವರ ಪರವಾಗಿ ಇತ್ತು. ಈಗಲೂ ದೇಶದ ಜನತೆ ಅದೇ ಕೆಲಸವನ್ನು ಮಾಡಬೇಕಿದೆ.

ಜಾತಿ ಗಣತಿ:

ಕೇಂದ್ರ ಸರಕಾರ ಜಾತಿಗಣತಿಗೆ ಮುಂದಾಗಿರುವುದನ್ನು ಸ್ವಾಗತಿಸಿದ ವಿಶ್ವನಾಥ್‌,  ಕೇಂದ್ರದ ಜಾತಿ ಗಣತಿಯನ್ನು ದೇಶದ ಎಲ್ಲಾ ಜನರು ಸ್ವಾಗತ ಮಾಡುತ್ತಾರೆ. ನಾನೂ ಕೂಡ ಕೇಂದ್ರದ ಜಾತಿಗಣತಿಯನ್ನು ಸ್ವಾಗತಿಸುತ್ತೇನೆ. ರಾಜ್ಯದ ಜಾತಿಗಣತಿಗೂ ಕೇಂದ್ರ ಜಾತಿಗಣತಿಗೂ ಬಹಳ ವ್ಯತ್ಯಾಸವಿದೆ.

ರಾಜ್ಯದಲ್ಲಿ 10 ವರ್ಷದಿಂದ ಜಾತಿಗಣತಿ ವರದಿ ನಡೆಯುತ್ತಲೇ ಇದೆ. ಆದರೆ ಅದು ಇಂದಿಗೂ ಮಂಡನೆಯಾಗಲಿಲ್ಲ. ಕಾಂತರಾಜು ವರದಿ ಇನ್ನು ನಮ್ಮ ಕೈಗೆ ಸಿಕ್ಕಿಲ್ಲ. ಸಿಕ್ಕಿರುವುದು ಕೆ.ಜಯಪ್ರಕಾಶ್‌  ಹೆಗ್ಡೆ ಅವರ ವರದಿ ಮಾತ್ರ. ಕಾಂತರಾಜು ವರದಿ ಏನಾಯಿತು..? ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಗಂಭೀರತೆಯನ್ನು ಅರಿತಿಲ್ಲ. ಸಿದ್ದರಾಮಯ್ಯ ಸುಖಾ ಸುಮ್ಮನೆ ಏನೇನೋ ಮಾತನಾಡುತ್ತಾರೆ. ಕೇಂದ್ರದ ಜಾತಿಗಣತಿಯನ್ನು ಎಲ್ಲಾ ಸಮುದಾಯಗಳು ಸ್ವಾಗತ ಮಾಡಿವೆ. ಕೇಂದ್ರ ಯಾವಗ ಜಾತಿಗಣತಿ ಮಾಡುವುದಕ್ಕೆ ಮುಂದಾಗಿರುವು ಕಾರಣ ಇನ್ನು ರಾಜ್ಯದ ಗಣತಿಗೆ ಬೆಲೆ ಇರುವುದಿಲ್ಲ.

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರು‌ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಅವರು ಆಗಲಾದರೂ ಇದನ್ನು ಪರಿಷ್ಕರಿಸಿಬಹುದಾಗಿತ್ತು. ಆದರೆ ಅವರು ಸಹ ಸಮ್ಮುನೆ ಇದ್ದರು . ಇದರಲ್ಲೆ ಗೊತ್ತಗುತ್ತಾದೆ ಅಲ್ಲವೇ. ರಾಜ್ಯದ ಜಾತಿಗಣತಿಯನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮೈಸೂರಿನಲ್ಲಿ ಎಂ.ಎಲ್.ಸಿ ಹೆಚ್.ವಿಶ್ವನಾಥ್ ಹೇಳಿಕೆ.

ಸಿದ್ದು ಕೈ ಎತ್ತಿದ್ದು…

ಬೆಳಗಾವಿ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಕೋಪೋದ್ರಿಕರಾಗಿ ಕೈ ಎತ್ತಿದ ವಿಚಾರ ಪ್ರಸ್ತಾಪಿಸಿದ ವಿಶ್ವನಾಥ್‌, ಸಿದ್ದರಾಮಯ್ಯ ಅವರು ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಈ ರೀತಿ ಮಾತನಾಡಿಸಲು ಹೋಗಿ ಅವರೇ ಸಮಾಜದಲ್ಲಿ ಏಕಾಂಗಿಯಾಗುತ್ತಿದ್ದಾರೆ. ಇದ್ದರಿಂದ ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದಲ್ಲಿ ಇರುವ ನೀವೆ ಈ ರೀತಿ ಮಾಡೋದು ತಪ್ಪು. ಅಧಿಕಾರಿಗಳ ಮೇಲೆ ಕೈ ಎತ್ತಿದರೆ ಅಧಿಕಾರಿಗಳು ಕೆಲಸ ಮಾಡುವುದಾದರೂ ಹೇಗೆ..? ಸಿಎಂ ಸಿದ್ದರಾಮಯ್ಯ  ವರ್ತನೆಗೆ ಕಿಡಿ ಕಾರಿದ ಎಂ.ಎಲ್.ಸಿ ಹೆಚ್.ವಿಶ್ವನಾಥ್.

key words:  Jai Pakistan, will be shot dead, MLC Vishwanath, Mysore

SUMMARY:

Those who say ‘Jai Pakistan’ will be shot dead: MLC Vishwanath. Those who said ‘Jai Pakistan’ should have been shot dead. Some of the boys eat the rice here and say, ‘Jai to Pakistan’. Those who live in our country and say ‘Jai to Pakistan’ are traitors. A new law should be enacted in this regard.