Monday, August 3, 2026

BDA Apartments

Home Front Page ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ: ಬಿಜೆಪಿಗೆ ಕುಟುಕಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್

ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ: ಬಿಜೆಪಿಗೆ ಕುಟುಕಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್

ಬೆಂಗಳೂರು,ಫೆಬ್ರವರಿ,3,2026 (www.justkannada.in): ಸರ್ಕಾರದ ವಿರುದ್ದ ಬಿಜೆಪಿಯವರು 80% ಭ್ರಷ್ಟಾಚಾರ ಎಂದು ಹೇಳುವುದು ಸರಿಯಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಂಜುನಾಥ್, ನಾವು ಇಷ್ಟು ಪರ್ಸಂಟ್ ಅಂತಾ ಹೇಳುತ್ತಿಲ್ಲ ಬಿಜೆಪಿಯವರು ರಾಜಕೀಯಕ್ಕಾಗಿ ಭ್ರಷ್ಟಾಚಾರ ಆರೋಪ ಮಾಡಬಾರದು.  ನಾವು ಪರ್ಸೆಂಟ್ ಹೇಳುತ್ತಿಲ್ಲ. ಆದರೆ ಭ್ರಷ್ಟಾಚಾರ ಇದೆ.  ಹೀಗಾಗಿ ಸಿಎಂ ಸಿದ್ದರಾಮಯ್ಯ  ಈ ಬಗ್ಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಡಿಕೆ ಶಿವಕುಮಾರ್,  ಸತೀಶ್ ಜಾರಕಿಹೊಳಿ ಸೌಹಾರ್ದತೆಯಿಂದ ಮಾತನಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಇದುವರೆಗೂ ಒಂದು ಸಭೆ ಮಾಡಿಲ್ಲ. ಎಲ್ಲಾ ಅಧಿಕಾರಿಗಳು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಲಿ.  ಸಿಎಂ ಸಿದ್ದರಾಮಯ್ಯ ಸಭೆ ಕರೆದರೆ ನಮ್ಮ ಸಮಸ್ಯೆಗಳನ್ನ ಹೇಳುತ್ತೇವೆ ಎಂದು ಗುತ್ತಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್  ಹೇಳಿದರು.

Key words: Corruption, allegations, BJP, Contractors Association, Manjunath