Friday, September 18, 2026

BDA Apartments

ಅಬಕಾರಿ ಇಲಾಖೆ ಭ್ರಷ್ಟಾಚಾರದ ಹಣ ಚುನಾವಣಾ ರಾಜ್ಯಗಳಿಗೆ- ಆರ್.ಅಶೋಕ್ ಆರೋಪ BDA JK_A...
Home Front Page ಅಬಕಾರಿ ಇಲಾಖೆ ಭ್ರಷ್ಟಾಚಾರದ ಹಣ ಚುನಾವಣಾ ರಾಜ್ಯಗಳಿಗೆ- ಆರ್.ಅಶೋಕ್ ಆರೋಪ

ಅಬಕಾರಿ ಇಲಾಖೆ ಭ್ರಷ್ಟಾಚಾರದ ಹಣ ಚುನಾವಣಾ ರಾಜ್ಯಗಳಿಗೆ- ಆರ್.ಅಶೋಕ್ ಆರೋಪ

ಬೆಂಗಳೂರು,ಫೆಬ್ರವರಿ,3,2026 (www.justkannada.in): ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹಣ ಚುನಾವಣಾ ರಾಜ್ಯಗಳಿಗೆ ಹೋಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಆರ್.ಅಶೋಕ್, ಭ್ರಷ್ಟಾಚಾರ ವಿಚಾರದಲ್ಲಿಎ1 ಅಬಕಾರಿ ಇಲಾಖೆ.  ಭ್ರಷ್ಟಾಚಾರದ ಬಗ್ಗೆ ಪ್ರತಿದಿನವೂ ಕೂಡ ಒಂದೊಂದು ಆಡಿಯೋ ವಿಡಿಯೋ  ಬರುತ್ತಿದೆ. ಅಬಕಾರಿ ಇಲಾಖೆ ಭ್ರಷ್ಟಾಚಾರ ದೇಶದಲ್ಲಿ ಸುದ್ದಿ ಮಾಡುತ್ತಿದೆ. ಅಬಕಾರಿ ಇಲಾಖೇ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಚಕಾರ ಎತ್ತುತ್ತಿಲ್ಲ, ಮೌನಮೂರ್ತಿಯಾಗಿದ್ದಾರೆ ಎಂದು ಕಾಲೆಳೆದರು.

ಭ್ರಷ್ಟಾಚಾರದ ಹಣವನ್ನ ಚುನಾವಣಾ ರಾಜ್ಯಗಳಿಗೆ ಕಳುಸುತ್ತಿದ್ದಾರೆ  ಗಾಂಧಿಯ ಆದರ್ಶವನ್ನ ಅಬಕಾರಿ ಇಲಾಖೆ ಪಾಲಿಸುತ್ತಿದೆಯೇ? ಎಂದು ಪ್ರಶ್ನಿಸಿದರು. ಮದ್ಯದಂಗಡಿ ಹೆಸರು ಬದಲಾವಣೆಗೆ 5% ನಿಂದ 10%ವರೆಗೆ ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

Key words: Excise Department, corruption, R. Ashok, Session