Sunday, August 9, 2026

BDA Apartments

Home Front Page ಬಿಜೆಪಿಗೆ ಬರುವಂತೆ ಜೆಡಿಎಸ್ ಶಾಸಕನಿಗೆ ನೇರ ಆಹ್ವಾನ ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್…

ಬಿಜೆಪಿಗೆ ಬರುವಂತೆ ಜೆಡಿಎಸ್ ಶಾಸಕನಿಗೆ ನೇರ ಆಹ್ವಾನ ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್…

ಮೈಸೂರು,ಜನವರಿ,20,2021(www.justkannada.in):  ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಶಾಸಕ ಜಿ.ಟಿ ದೇವೇಗೌಡರಿಗೆ ಬಿಜೆಪಿಗೆ ಬರುವಂತೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನೇರ ಆಹ್ವಾನ ನೀಡಿದ್ದಾರೆ.jk

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ  ಮಾತನಾಡಿದ ಹೆಚ್.ವಿಶ್ವನಾಥ್,  ನಮಗಿಂತ ಮೊದಲೇ ನೀವು ಬಿಜೆಪಿಯಲ್ಲಿದ್ಧವರು. ಬಿಜೆಪಿ ಜೊತೆ ನಿಮಗೆ ಉತ್ತಮ ಬಾಂಧವ್ಯವಿದೆ. ಬಿಜೆಪಿ ಕೂಡ ನಿಮ್ಮನ್ನ ಉತ್ತಮವಾಗಿ ನಡೆಸಿಕೊಂಡಿದೆ.  ನೀವು ಕಾಂಗ್ರೆಸ್ ಗೆ ಹೋಗಿ ಹೊಡೆತ ತಿನ್ನುವ ಬದಲು ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿದರು. MLC- H. Vishwanath - direct invitation - JDS MLA- BJP.

ಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ…

ಇನ್ನು ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುವ ಎಂಎಲ್ ಸಿ ಹೆಚ್.ವಿಶ್ವನಾಥ್, ಮೈಸೂರು ಉಸ್ತುವಾರಿ ವಿಚಾರವಾಗಿಯೂ ಕಿಡಿಕಾರಿದ್ದಾರೆ. ಸಿ.ಪಿ ಯೋಗೇಶ್ವರ್ ಗೆ ಮೈಸೂರಿನ ಉಸ್ತುವಾರಿ ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ. ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ. ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕುತ್ತಾನೆ ಎಂದು ಕಿಡಿಕಾರಿದರು.

Key words: MLC- H. Vishwanath – direct invitation – JDS MLA- BJP.