Saturday, October 17, 2026

Dasara Wishes

Happy Dasara
Home Front Page ‌ನನ್ನ ಸೇವೆ ಪರಿಗಣಿಸಿ  ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ- ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ  ಮನವಿ.

‌ನನ್ನ ಸೇವೆ ಪರಿಗಣಿಸಿ  ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ- ‘ಕೈ’ ಅಭ್ಯರ್ಥಿ ಮರಿತಿಬ್ಬೇಗೌಡ  ಮನವಿ.

ಮೈಸೂರು,ಜೂನ್,1,2024 (www.justkannada.in): ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ‌ನನ್ನ ಸೇವೆಯನ್ನ ಪರಿಗಣಿಸಿ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ  ಮನವಿ ಮಾಡಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಿತಿಬ್ಬೇಗೌಡ, ನಾಲ್ಕು ಬಾರಿ ಗೆದ್ದಾಗಲೂ ನಾನು  ಶಿಕ್ಷಕರ ಧ್ವನಿಯಾಗಿ ನಾನು ಕೆಲಸ ಮಾಡಿದ್ದೇನೆ.  ಕೆಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿವೆ, ಆದರೆ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ನನ್ನನ್ನು ಆಯ್ಕೆ ಮಾಡಿದ ಶಿಕ್ಷಕ ಸಮುದಾಯಕ್ಕೆ ಅಪಕೀರ್ತಿ ತರುವಂತಹ ಕೆಲಸ ಮಾಡಿಲ್ಲ ಎಂದರು.

ಮೊದಲ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಗೆದ್ದಿದ್ದೆ. ಆ ನಂತರ ಒಮ್ಮೆ ಸ್ವತಂತ್ರವಾಗಿ, ಎರಡು ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದೇನೆ. ಇದೀಗ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿದಿದ್ದೇ‌ನೆ. ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ಅವಕಾಶವಿದೆ. ಹಾಗಾಗಿ ‌ನನ್ನ ಸೇವೆಯನ್ನು ಪರಿಗಣಿಸಿ ಮತ್ತೊಮ್ಮೆ ಗೆಲ್ಲಿಸಬೇಕೆಂದು  ಮರಿತಿಬ್ಬೇಗೌಡ  ಮನವಿ ಮಾಡಿದರು.

Key words: MLC Election,  congress, candidate, Marithibbe Gowda