ನನಗೆ ಸತತ 2ನೇ ಬಾರಿ ಅವಕಾಶ ನಿರಾಕರಿಸಲಾಗಿದೆ: ಇದು ದೇವರ ಚಿತ್ತ: ಬೇಸರ ಹೊರಹಾಕಿದ ಗೋ. ಮಧುಸೂಧನ್

ಮೈಸೂರು,ಮಾರ್ಚ್,12,2022(www.justkannada.inದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಗೋ. ಮಧೂಸೂಧನ್ ಅವರು ಬೇಸರ ಹೊರ ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗೋ ಮಧುಸೂಧನ್, ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ನಾನು 3 ಬಾರಿ ಸ್ಪರ್ಧೆ ಮಾಡಿದ್ದೆ. 3 ಬಾರಿ ನನ್ನ ಹರಸಿ ಆಶೀರ್ವಾದಿಸಿದ್ದಾರೆ. ಆದರೆ ಸತತ 2ನೇ ಬಾರಿ ಅವಕಾಶ ನಿರಾಕರಿಸಲಾಗಿದೆ ಇದು ದೇವರ ಚಿತ್ತ  ಎಂದು ಹೇಳಿದ್ದಾರೆ.  ಹಾಗೆಯೇ ನನ್ನ ಪರ ನಿಂತವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಗೋ. ಮಧುಸೂದನ್  ಪೋಸ್ಟ್ ಹಾಕಿದ್ದಾರೆ.

ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ನಾಲ್ಕು ಕ್ಷೇತ್ರಗಳ ಪೈಕಿ 3ಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.

ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿ‌ನ್ನೆಲೆ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದ್ದು, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ  ಅರುಣ್ ಶಹಾಪುರ್ , ವಾಯವ್ಯ ಪದವೀಧರ ಕ್ಷೇತ್ರದಿಂಧ ಹನುಮಂತ ನಿರಾಣಿ, ದಕ್ಷಿಣ ಪದವೀಧರ ಕ್ಷೇತ್ರದಿಂದ ಎಂ.ವಿ.ರವಿಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ.

key words:MLC-election-bjp-GO. Madhusudhan