ಅವಧಿಗೂ ಮುನ್ನ ಚುನಾವಣೆ ಬಂದರೆ ಎದುರಿಸಲು ಸಿದ್ಧ- ಮಾಜಿ ಸಿಎಂ ಸಿದ್ದರಾಮಯ್ಯ.

ಕಲ್ಬುರ್ಗಿ,ಮಾರ್ಚ್,12,2022(www.justkannada.in): ಬಿಜೆಪಿಯವರು ಅವಧಿಗೂ ಮುನ್ನ ಚುನಾವಣೆಗೆ ಹೋಗಲ್ಲ. ಅವಧಿಗೂ ಮುನ್ನ ಚುನಾವಣೆ ಬಂದರೆ ಎದುರಿಸಲು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನುಡಿದರು.

ಕಲ್ಬರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ಅವಧಿಗೂ ಮುನ್ನ ಚುನಾವಣೆಗೆ ಹೋಗಲ್ಲ. ಜಿಲ್ಲಾ ಪಂಚಾಯಿತ್ ಚುನಾವಣೆಯನ್ನೇ ಮಾಡದವರು ವಿಧಾನ ಸಭೆ ಚುನಾವಣೆ ಮಾಡ್ತಾರಾ..? ಎಂದು ಬಿಜೆಪಿಗೆ ಕುಟುಕಿದರು.  ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ಮಾಡಲ್ಲ. ಒಂದು ವೇಳೆ ಮಾಡಿದರೇ ಎದುರಿಸಲು ನಾವು ಸಿದ್ಧ ಎಂದು ಹೇಳಿದರು.sidda

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಎಲ್ಲಾ ಪಕ್ಷಗಳಲ್ಲಿಯೂ ಭಿನ್ನಾಭಿಪ್ರಾಯ ಇದ್ಧೇ ಇರುತ್ತೆ. ಸಿಎಂ ವಿರುದ್ಧ ಕೆ.ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಶಾಸಕ ಯತ್ನಾಳ್ ಸರ್ಕಾರದ ವಿರುದ್ಧ ಮಾತನಾಡಿಲ್ವಾ..? ಇದೆಲ್ಲಾ ರಾಜ್ಯ ಬಿಜೆಪಿಯಲ್ಲಿರುವ  ಭಿನ್ನಾಭಿಪ್ರಾಯವಲ್ಲವಾ..? ಎಂದು ಪ್ರಶ್ನಿಸಿದರು.

Key words: assembly-elections-siddaramaiah