Sunday, October 4, 2026

BDA Apartments

Home Front Page ಹಲಾಲ್ ಮುಕ್ತ ದೀಪಾವಳಿ ಕ್ಯಾಂಪೇನ್ ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಗರಂ.

ಹಲಾಲ್ ಮುಕ್ತ ದೀಪಾವಳಿ ಕ್ಯಾಂಪೇನ್ ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಗರಂ.

ಹುಬ್ಬಳ್ಳಿ,ಅಕ್ಟೋಬರ್, 21,2022(www.justkannada.in):  ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆ ನೀಡಿರುವ ಹಿನ್ನೆಲೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್,  ಪ್ರಮೋದ್ ಮುತಾಲಿಕ್ ಹೇಳಿದ ತಕ್ಷಣ ಯಾರೂ ಖರೀದಿಸದೆ ಇರುವುದಿಲ್ಲ.  ಮುತಾಲಿಕ್  ಹಿಂದೂ ಪರನೂ ಅಲ್ಲ ಮುಸ್ಲೀಂ ಪರನೂ ಅಲ್ಲ. ಇವರ ಬೇಳೆ ಬೇಯಿಸಿಕೊಳ್ಳಲು ಮಾತನಾಡುತ್ತಾರೆ.  ಹಲಾಲ್ ಕಟ್ ಬಗ್ಗೆ ಮಾತಾಡಿದ್ದು ಕೇವಲ ನಾಲ್ಕೈದು ಜನ ಮಾತ್ರ.  ಹಿಂದೂಗಳು ನಾವು ಮುಸ್ಲೀಮರ ಬಳಿ ಖರೀದಿಸುತ್ತೇವೆ ಅಂತಾರೆ .ಹಲಾಲ್ ಮುಕ್ತ ದೀಪಾವಳಿ ಕ್ಯಾಂಪೇನ್ ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಗರಂ jameer

ಆದರೆ ಕೆಲವರು ಹಿಂದೂ ಮುಸ್ಲೀಂ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹಿಂದೂಗಳೇ ಇದನ್ನ ವಿರೋಧ ಮಾಡಿದ್ದಾರೆ. ನಾವು ಇಲ್ಲಿ ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ನುಡಿದರು.

Key words: MLA- Zameer Ahmed Khan – Halal- Free- Diwali- Campaign.