ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ.

ಮೈಸೂರು,ಅಕ್ಟೋಬರ್,21,2022(www.justkannada.in):  ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ.

ನಂದಿ ಮಾರ್ಗದಲ್ಲಿ ಮತ್ತೆ ರಸ್ತೆ ಕುಸಿದಿದೆ. ಬಾರಿ ಮಳೆಯಿಂದಾಗಿ ಈ ಹಿಂದೆಯೂ ಚಾಮುಂಡಿ ಬೆಟ್ಟದಲ್ಲಿ ರಸ್ತೆ ಕುಸಿದಿತ್ತು. ಇದೀಗ ವೀಕ್ಷಣಾ ಗೋಪುರದ ಪಕ್ಕದಲ್ಲೇ ಕುಸಿದಿದೆ.

ಕಳೆದ ಮೂರು ದಿನದಿಂದ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದು, ಒಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದರೇ ಮತ್ತೊಂದೆಡೆ ರಸ್ತೆ ಕುಸಿತವಾಗಿದೆ. ಈ ಹಿಂದೆ ಕುಸಿತ ಕಂಡಿದ್ದ ಜಾಗದಿಂದ ನೂರು ಮೀಟರ್ ದೂರದಲ್ಲಿ ಮತ್ತೆ ರಸ್ತೆ ಕುಸಿದಿದೆ.

Key words: Landslide- again – Chamundi hill – Mysore.