Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ ಶಾಸಕ ತನ್ವೀರ್ ಸೇಠ್…

ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ ಶಾಸಕ ತನ್ವೀರ್ ಸೇಠ್…

ಮೈಸೂರು,ಮಾ,6,2020(www.justkannada.in):  ತಮ್ಮ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಶಾಸತ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಗೃಹ ಸಚಿವ ಬಸವರಾಜು ಬೊಮ್ಮಾಯಿಗೆ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್‌. ಈ ಪ್ರಕರಣದ ಆರೋಪಿಯನ್ನ ಈಗಾಗಲೇ ಬಂಧಿಸಲಾಗಿದೆ. ಆದರೂ ತನಿಖೆ ಮಾತ್ರ  ನಿಧಾನಗತಿಯಲ್ಲಿ ನಡೆಯುತ್ತಿದೆ‌. ಈ ಪ್ರಕರಣದ ಹಿಂದಿರುವ ಪ್ರಮುಖರು, ಸಂಘಟನೆ ಹಾಗೂ ಹಲ್ಲೆಯ ಉದ್ದೇಶವನ್ನ ಪತ್ತೆ ಹಚ್ಚಲು ಆಗಿಲ್ಲ. ಇದರಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಈ ಪ್ರಕರಣದ ತೀವ್ರತೆಯನ್ನ ಪರಿಗಣಿಸಿಬೇಕು. ಕೂಡಲೇ ಹಲ್ಲೆಯ ಹಿಂದಿರುವ ಪ್ರಮುಖರು, ಸಂಘಟನೆಯನ್ನ ಪತ್ತೆಹಚ್ಚಬೇಕು. ನಮಗೆ ನ್ಯಾಯ ಒದಗಿಸಬೇಕು ಎಂದು ಗೃಹ ಸಚಿವರಿಗೆ ಪತ್ರದ ಮೂಲಕ  ಶಾಸಕ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

Key words:  MLA -Tanveer Saith – wrote -letter – Home Minister- Basavaraja Bommai