ಸಿದ್ದರಾಮಯ್ಯ  ಬಿಜೆಪಿಗೆ ಬಂದ್ರೆ ಕೇಂದ್ರದ ಮಂತ್ರಿ ಮಾಡ್ತೀವಿ- ಹೀಗಂದಿದ್ದು ಯಾರು ಗೊತ್ತೆ…?

ಕಲ್ಬುರ್ಗಿ,ಮಾ,6,2020(www.justkannada.in):  ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿಗೆ ಬರಬಹುದು ಸಿದ್ಧರಾಮಯ್ಯ ಬಿಜೆಪಿಗೆ ಬಂದರೇ ಕೇಂದ್ರದ ಮಂತ್ರಿ ಮಾಡುತ್ತೇವೆ.. ಹೀಗೆ ಹೇಳಿದ್ದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್.

ಇಂದು ಕಲ್ಬುರ್ಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಾಬುರಾವ್ ಚಿಂಚನಸೂರ್,  ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯರನ್ನ ಕಂಡರೇ ಕೆಲವರಿಗೆ ಆಗಲ್ಲ ಹೀಗಾಗಿ ಸಿದ್ಧರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಅದ್ದರಿಂದ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಸೇರಬಹುದು ಬಿಜೆಪಿ ಸೇರಿದರೇ ಸಿದ್ಧರಾಮಯ್ಯರನ್ನ ಕೇಂದ್ರದ ಮಂತ್ರಿ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಶಾಸಕರು ಸೇರ್ಪಡೆಗೆ ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ಟರೆ ಎರಡೂ ಪಕ್ಷಗಳು ವೈಟ್ ವಾಶ್ ಆಗುತ್ತವೆ  ಎಂದು ಬಾಬುರಾವ್ ಚಿಂಚನಸೂರ್ ತಿಳಿಸಿದರು.

Key words: former cm-Siddaramaiah – BJP-  Centra minister