ದೇಶದ ಮಾಧ್ಯಮ ಲೋಕದಲ್ಲಿ ತಳ ಸಮುದಾಯದಕ್ಕೆ ಸೇರಿದ ಮುಖ್ಯಸ್ಥರೇ ಇಲ್ಲ : ‘ನ್ಯೂಸ್ ಲಾಂಡ್ರಿ’ ಸಮೀಕ್ಷೆ

 

ಬೆಂಗಳೂರು, ಮಾ.06, 2020 : (www.justkannada.in news ) ಭಾರತದ ಮಾಧ್ಯಮ ಕ್ಷೇತ್ರದಲ್ಲಿನ ಜಾತಿ ಪೂರ್ವಗ್ರಹದ ಬಗ್ಗೆ ಸಮೀಕ್ಷೆಯನ್ನು ‘ನ್ಯೂಸ್ ಲಾಂಡ್ರಿ’ ಆಕ್ಸ್‌ಪಮ್ ಜೊತೆ ಸೇರಿ ನಡೆಸಿದೆ. ಇದು 2018ರ ಅಕ್ಟೋಬರ್ ನಿಂದ 2019ರ ಮಾರ್ಚ್ ಅವಧಿಯಲ್ಲಿ ನಡೆಸಲಾದ ಸಮೀಕ್ಷೆ.

ಸಮೀಕ್ಷೆಯ ಮುಖ್ಯಾಂಶಗಳು ಹೀಗಿವೆ:

media-india-karnataka-controled-by-upper-community-dalits-obcs-neglected

-ದೇಶದ ಪ್ರಮುಖ ಆರು ಇಂಗ್ಲಿಷ್ ಮತ್ತು 7 ಹಿಂದಿ ಪತ್ರಿಕೆಗಳಲ್ಲಿ ತಳಸಮುದಾಯಕ್ಕೆ ಸೇರಿದ ಮುಖ್ಯಸ್ಥರೇ ಇಲ್ಲ.
-ದೇಶದ ಟಿವಿ ಚಾನೆಲ್‌ಗಳ ಪ್ರತಿ ನಾಲ್ಕು ಆ್ಯಂಕರ್‌ಗಳ ಪೈಕಿ ಮೂವರು ಮೇಲ್ಜಾತಿಯವರು.
–ದೇಶದ 12 ಪತ್ರಿಕೆಗಳಲ್ಲಿ ಪ್ರಕಟವಾಗಿರುವ 972 ಲೇಖನಗಳಲ್ಲಿ ಕೇವಲ 10 ಮಾತ್ರ ಜಾತಿ ವ್ಯವಸ್ಥೆಗೆ ಸಂಬಂಧಿಸಿದ್ದು.
-ದೇಶದ 121 ಸುದ್ದಿ ಮನೆಗಳಲ್ಲಿ 106ರಲ್ಲಿ ನಾಯಕತ್ವ ಮೇಲ್ಜಾತಿಯವರದ್ದು. ಇವರಲ್ಲಿ ದಲಿತರು ಯಾರೂ ಇಲ್ಲ.
-ಟಿವಿ ಚಾನೆಲ್‌ಗಳ ಪೆನಲಿಸ್ಟ್‌ಗಳಲ್ಲಿ ಶೇಕಡಾ 5ರಷ್ಟು ಮಾತ್ರ ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು ಇಲ್ಲ..
– ಎಲ್ಲ ಟಿವಿ ಚಾನೆಲ್ ಗಳಲ್ಲಿ ಶೇಕಡಾ 89ರಷ್ಟು ನಾಯಕತ್ವ ಮೇಲ್ಜಾತಿಯವರದ್ದು.
-ಹಿಂದಿ ಚಾನೆಲ್‌ಗಳಲ್ಲಿ ನೂರಕ್ಕೆ ನೂರರಷ್ಟು ನಾಯಕತ್ವ ಮೇಲ್ಜಾತಿಯವರದ್ದು.
ಇನ್ನೂ ಇದೆ….ಈ ಲಿಂಕ್ ನ ನೋಡಿ :

key words : media-india-karnataka-controled-by-upper-community-dalits-obcs-neglected