ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಎಸ್.ಎ ರಾಮದಾಸ್ ರಿಂದ ಸನ್ಮಾನ…

ಮೈಸೂರು,ಆ,14,2020(www.justkannada.in): ಕೊರೋನಾ ವೈರಸ್ ಆತಂಕದ ನಡುವೆ ಜೂನ್ 25 ರಿಂದ ಜುಲೈ 4 ರವರಗೆ ನಡೆದಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ ರಾಮದಾಸ್ ಸನ್ಮಾನಿಸಿದರು.

ಕೃಷ್ಣರಾಜ ಕ್ಷೇತ್ರದ ನಿವಾಸಿಗಳಾದ ಸರಸ್ವತಿಪುರಂ ವಿಜಯ ವಿಠಲಶಾಲೆ ವಿದ್ಯಾರ್ಥಿ ಸಿ.ಮನು ( ಸಿಸಿಬಿ ಅಧಿಕಾರಿ ಸಿ.ಚಿಕ್ಕಣ್ಣ ಹಾಗೂ ಭಾಗ್ಯ.ಎನ್ ರವರ ಪುತ್ರ) ಹಾಗೂ ರೋಟರಿ ಐಡಿಯಲ್ ಜಾವಾ ಶಾಲೆಯ ಎನ್.ಆರ್.ಪ್ರೇಕ್ಷಾ(ಅಡ್ವೋಕೇಟ್ ಎನ್.ಆರ್.ರವಿಂದ್ರೇ ಗೌಡ ಮತ್ತು ರೂಪ ರವರ ಪುತ್ರಿ) ಈ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳಿಗೆ 623 ಅಂಕ ಗಳನ್ನು ಪಡೆದು ಮೈಸೂರಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.jk-logo-justkannada-logo

ಹೀಗಾಗಿ ಈ ವಿದ್ಯಾರ್ಥಿಗಳನ್ನ ಕೃಷ್ಣರಾಜ ಕ್ಷೇತ್ರದ ಶಾಸಕ  ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಅವರು ವಿದ್ಯಾರಣ್ಯಪುರಂ ಕಛೇರಿಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನಿತ ವಿದ್ಯಾರ್ಥಿಗಳಾದ ಮನು.ಸಿ ರವರು ಮತ್ತು  ಎನ್.ಆರ್.ಪ್ರೇಕ್ಷಾ ರವರು ಇಬ್ಬರು ಮುಂದಿನದಿನಗಳಲ್ಲಿ ಐ.ಎ.ಎಸ್ ಅಧಿಕಾರಿಗಳಾಗಿ ಸಾರ್ವಜನಿಕ ಸೇವೆಯನ್ನು ಮಾಡುವ ಕನಸು ಕಂಡಿದ್ದು ಅದನ್ನು ನನಸಾಗಲೆಂದು ನೆರೆದಿದ್ದವರು ವಿದ್ಯಾರ್ಥಿಗಳಿಗೆ ಹಾರೈಸಿದರು.mla-sa-ramadas-mysore-students-first-place-sslc-exam

ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳ ಪೋಷಕರು  ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ನೂರ್ ಫಾತೀಮ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಆಶ್ರಯ ಸಮಿತಿ ಸದಸ್ಯರಾದ ವಿದ್ಯಾ ಅರಸ್, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಉಪಾಧ್ಯಕ್ಷರಾದ ಬಾಲಕೃಷ್ಣ.ಎಂ.ಆರ್, ಸಂತೋಷ್ (ಶಂಭು), ವಿನಯ್ ಪಾಂಚಜನ್ಯ ಕಾರ್ಯದರ್ಶಿಗಳಾದ ಪ್ರಸಾದ್ ಬಾಬು,  ಗಿರೀಶ್ ಗೌಡ, ಪಿ.ಟಿ.ಕೃಷ್ಣ ಉಪಸ್ಥಿತರಿದ್ದರು.

Key words: MLA -SA-Ramadas – Mysore -students – first place – SSLC exam