ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸರು ಇಡಬೇಕೆಂದು ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹ.

ಬೆಳಗಾವಿ,ಡಿಸೆಂಬರ್,15,2023(www.justkannada.in): ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸರು ಇಡಬೇಕೆಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಪ್ರಸಾದ್ ಅಬ್ಬಯ್ಯ,  ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸರು ಇಡಬೇಕು ಎಂದು ಸದನಲ್ಲಿ ಪ್ರಸ್ತಾಪಿಸಿದ್ದೇನೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಸ್ಲಿಂ ರಾಷ್ಟ್ರೀಯ ನಾಯಕರನ್ನ ವಿರೋಧಿಸಿಕೊಂಡು ಬಂದಿದ್ದಾರೆ.  ಟಿಪ್ಪು ಒಬ್ಬ ರಾಷ್ಟ್ರೀಯ ಪ್ರೇಮಿ. ಮೊದಲ ಸ್ವಾತಂತ್ರ್ಯ ಹೋರಾಟಗಾರರು.  ಮೈಸೂರು ಆಂಗ್ಲೋ ಮೂರು ಯುದ್ದ ಮಾಡಿದವರು. ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಇತಿಹಾಸವಿದೆ.. ಆದ್ರೆ ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡ್ತಿದ್ದಾರೆ.  ಯಾರು ಬ್ರಿಟಿಷ್ ರಿಗೆ ಸೆರೆಂಡರ್ ಆಗಿದ್ರೋ ಯಾರು ಬ್ರಿಟಿಷ್ ರಿಂದ ಪಿಂಚಣಿ ಪಡೆಯುತ್ತಿದ್ದರೋ  ಅವರನ್ನ ಬಿಜೆಪಿ ರಾಷ್ಟ್ರಪ್ರೇಮಿ ಎಂದು ಬಿಜೆಪಿ ಬಿಂಬಿಸಲು ಹೊರಟಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಾವರ್ಕರ್ ಫೋಟೋ  ಹಾಕಿದ್ದಕ್ಕೆ ಕಿಡಿಕಾರಿದರು.

ಟಿಪ್ಪು ಜಯಂತಿ ಆಚರಣೆ ಮಾಡೋದ್ರಲ್ಲಿ ತಪ್ಪೇನು? ರಾಷ್ಟ್ರ ಪ್ರೇಮಿಯ‌ ಹೆಸರಲ್ಲಿ‌ ಆಚರಣೆ ಮಾಡೋದ್ರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಶಾಸಕ ಪ್ರಸಾದ್ ಅಬ್ಬಯ್ಯ, ಬಿಜೆಪಿಯವರಿಗೆ ಹಿಂದು ಮುಸ್ಲಿಂ ಅನ್ನೋ ಅಜೆಂಡಾ ಬಿಟ್ಟು ಬೇರೆ ಏನು ಇಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಇತಿಹಾಸ ಒಪ್ಪಿಕೊಳ್ಳೋದಿಲ್ಲ. ಹೀಗಾಗಿ ಅವರು ಅಕ್ಷೇಪ ವ್ಯಕ್ತಪಡಿಸೋದು ಸಹಜ. ಆದ್ರೆ ನಾವು ಒಬ್ಬ ರಾಷ್ಟ ಪ್ರೇಮಿ ಸಾಮಾಜಿಕ ನ್ಯಾಯಕ್ಕೆ ಒತ್ತಕೊಟ್ಟವರು. ಸಾಂಬರ್ ಪದಾರ್ಥಗಳನ್ನ ಎಕ್ಸ ಪರ್ಟ್ ಮಾಡಿದ್ದು ,ರೇಷ್ಮೆ ವ್ಯಾಪಾರ ಬೆಳೆಸಿದ್ದು ಸೇರಿದಂತೆ ಹಲವು ಕೊಡಿಗೆಗಳಿವೆ. ಇದ್ರಿಂದ ನಾವು ಮೈಸೂರಿಗೆ ಟಿಪ್ಪು ಹೆಸರು ಸೂಕ್ತ ಎಂದು ಪ್ರಸ್ತಾಪಿಸಿದ್ದೇನೆ. ಮುಂದೆ ಸಿಎಂ ಜೊತೆಯೂ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಪ್ರಸಾದ್ ಅಬ್ಬಯ್ಯ ತಿಳಿಸಿದರು.

ಮೈಸೂರು ಪ್ರಾಂತ್ಯ ಉಳಿಸಲು ಟಿಪ್ಪು ಸುಲ್ತಾನ್ ಹೋರಾಟದ ಬಗ್ಗೆ ಗೊತ್ತಿದೆ – ಕಾಂಗ್ರೆಸ್ ಶಾಸಕ ಡಾ.ರಂಗನಾಥ್‌

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಲು ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್‌, ಚರಿತ್ರೆ ಬಗ್ಗೆ ಬಹಳಷ್ಟು ಅವಲೋಕನ ಮಾಡಬೇಕು . ನಾವು ಚಿಕ್ಕ ಮಕ್ಕಳಿಂದ ಟಿಪ್ಪು ಬಗ್ಗೆ ಓದಿದ್ದೇವೆ. ಮೈಸೂರು ಪ್ರಾಂತ್ಯ ಉಳಿಸಲು ಟಿಪ್ಪು ಸುಲ್ತಾನ್ ಹೋರಾಟ ಬಗ್ಗೆ ಗೊತ್ತಿದೆ. ಶೃಂಗೇರಿ ಮಠ ಉಳಿಯಬೇಕಾದರೆ ಅವರ ಹೋರಾಟ ಚರಿತ್ರೆ ಇದೆ. ತಿರುಪತಿ, ಶೃಂಗೇರಿಯಲ್ಲಿ ಮೊದಲ ಪೂಜೆ ಟಿಪ್ಪು ಸುಲ್ತಾನ್ ಹೆಸರಲ್ಲಿ ಆಗುತ್ತೆ. ಶ್ರೀರಂಗಪಟ್ಟಣದಲ್ಲಿ ರಂಗನಾಥ ದೇವಸ್ಥಾನ ಇದೆ. ಬಿಜೆಪಿಯ ಆಲೋಚನೆ ಕೋಮುವಾದ ಆಗಿದೆ. ಬಿಜೆಪಿ ಸಿದ್ದಾಂತ, ನಮ್ಮ ಸಿದ್ದಾಂತ ವಿಭಿನ್ನವಾಗಿದೆ ಎಂದರು.

ಸದನದಲ್ಲಿ ನೆಹರು ಪೋಟೋ ಹಾಕಲು ಒತ್ತಾಯ ವಿಚಾರ ಕುರಿತು  ಪ್ರತಿಕ್ರಿಯಿಸಿದ ಅವರು, ನೆಹರು ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕೊಸ್ಕರ ಕುಂಟಂಬದವರು ತ್ಯಾಗ ಮಾಡಿದ್ದಾರೆ ಜೀವ ಕಳೆದ ಕೊಂಡಿದ್ದಾರೆ. ಹಾಗಾಗಿ ಗೌರವ ಕೊಡುವ ಕೆಲಸ‌ ಮಾಡಬೇಕು. ಇತಿಹಾಸ ತಿರುಚಬಾರದು ಎಂದು ಡಾ.ರಂಗನಾಥ್ ಕಿಡಿಕಾರಿದರು.

Key words: MLA -Prasad Abbayya -demands – Mysore Airport – named – Tipu.