ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ- ಮಾಜಿ ಸಚಿವ ಜಗದೀಶ್ ಶೆಟ್ಟರ್ .

ಬೆಂಗಳೂರು,ಜುಲೈ,28,2021(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.jk

ಸಚಿವ ಸ್ಥಾನದ ಆಕಾಂಕ್ಷಿ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಜಗದೀಶ್ ಶೆಟ್ಟರ್, ನಾನು ಯಾವ ಹುದ್ದೆಯನ್ನು ನಿರೀಕ್ಷೆ ಮಾಡಲ್ಲ. ನನಗೆ ಯಾವುದೇ ಬೇಸರ ಇಲ್ಲ.  ನನಗೆ ಯಾವುದೇ ಸಚಿವ ಸ್ಥಾನ ಬೇಡ. ನೈತಿಕ ಕಾರಣದಿಂದ ನಾನು ಸಂಪುಟ ಸೇರಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದರು.

ಬಿಎಸ್ ವೈ ಜತೆ ಕೆಲಸ ಮಾಡಿರುವುದರಿಂದ ನಿರ್ಧಾರ. ಕಟೀಲ್ ಆಡಿಯೋ ಮತ್ತು ನನ್ನ ನಿರ್ಧಾರಕ್ಕೆ ಸಂಬಂಧ ಇಲ್ಲ. ಪಕ್ಷದ ವರಿಷ್ಟರು ಜವಾಬ್ದಾರಿ ನೀಡಿದರೇ ನಿಭಾಯಿಸುತ್ತೇನೆ. ಸಂಪುಟದಲ್ಲಿ ತನಗಿಂತ ಕಿರಿಯರಿಗೆ  ಅವಕಾಶ ನೀಡಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Key words: I am –not- joining -CM Basavaraja Bommai –cabinet-Former Minister- Jagdish Shettar.