Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ನಾಳೆಗೆ ಶಾಸಕ ಮುನಿರತ್ನ ‘ಬೇಲ್’ ಭವಿಷ್ಯ: ಜಾಮೀನು  ಆದೇಶ ಕಾಯ್ದಿರಿಸಿದ ಕೋರ್ಟ್

ನಾಳೆಗೆ ಶಾಸಕ ಮುನಿರತ್ನ ‘ಬೇಲ್’ ಭವಿಷ್ಯ: ಜಾಮೀನು  ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್,18,2024 (www.justkannada.in):  ಗುತ್ತಿಗೆದಾರ ಚಲುವರಾಜುಗೆ ಜೀವ ಬೆದರಿಕೆ , ಜಾತಿ ನಿಂದನೆ ಆರೋಪದಲ್ಲಿ ಬಂಧಿತರಾಗಿರುವ ಆರ್.ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿ ಆದೇಶವನ್ನ 82ನೇ ಸಿಸಿಹೆಚ್ ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ.

ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ ನೀಡಿದ, ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ನೀಡಿದೆ

ಈ ಮಧ್ಯೆ ಜಾಮೀನು ಕೋರಿ ಶಾಸಕ ಮುನಿರತ್ನ ಅವರು 82 ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.  ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಾಳೆಗೆ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದಾರೆ. ಹೀಗಾಗಿ ನಾಳೆ ಶಾಸಕ ಮುನಿರತ್ನ ಅವರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

Key words: MLA Muniratha, bail order, Court,  reserved, tomorrow