ಸಿಎಂ ಬದಲಾವಣೆಗೆ ಆಗ್ರಹಿಸಿದ ಹೆಚ್.ವಿಶ್ವನಾಥ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ.

ಬೆಂಗಳೂರು,ಜೂನ್, 17,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. jk

ಬಿಎಸ್ ವೈಗೆ  ಮೊದಲಿದ್ದ ಶಕ್ತಿ.ಸ್ಪಿರಿಟ್ ಇಲ್ಲ. ಸಿಎಂ ಸ್ಥಾನಕ್ಕೆ ಪಂಚಮಸಾಲಿ ಸಮುದಾಯದವರನ್ನೇ ಕೂರಿಸಲಿ ಎಂದು ಹೇಳುವ ಮೂಲಕ ಸಿಎಂ ಬದಲಾವಣೆಗೆ ಬೆಂಬಲಿಸಿರುವ ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಪಕ್ಷದ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ.  ಯಡಿಯೂರಪ್ಪಗೆ ವಯಸ್ಸಾಗಿದೆ ಅಂತೀರಾಲ್ಲ ನಿಮ್ಮ ವಯಸ್ಸೆಷ್ಟು. .ಸಿಎಂ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹರಿಹಾಯ್ದರು.

ಕೋರ್ಟ್ ಆದೇಶದಿಂದಾಗಿ ವಿಶ್ವನಾಥ್ ಗೆ ಮಂತ್ರಿಗಿರಿ ಸಿಗಲಿಲ್ಲ.  ಮಂತ್ರಿಗಿರಿ ಸಿಗದೆ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹೆಚ್.ವಿಶ್ವನಾಥ್ ರನ್ನ  ಸೋತರೂ ಸಹ ಬಿಎಸ್ ವೈ ಎಂಎಲ್ ಸಿ ಮಾಡಿದರು . ವಲಸಿಗ ಸಚಿವರೆಲ್ಲರೂ ಸಿಎಂ ಪರ ಇದ್ಧಾರೆ ಎಂದು ರೇಣುಕಾಚಾರ್ಯ ತಿಳಿಸಿದರು.

ಕಾಂಗ್ರೆಸ್ ನಲ್ಲಿ ಸ್ಥಾನ ಕೊಟ್ರು ಪಕ್ಷ ಬಿಟ್ರು. ಜೆಡಿಎಸ್ ನಲ್ಲಿ ಅಧಿಕಾರ ಕೊಟ್ರು ಅಲ್ಲೂ ಮೋಸ ಮಾಡಿದ್ರು. ಸಿಎಂ ಆಯ್ಕೆ ಮಾಡುವುದು ಎಂಎಲ್ ಸಿ ಶಾಸಕರಲ್ಲ ಎಂದು ಹೆಚ್.ವಿಶ್ವನಾಥ್ ವಿರುದ್ಧ ರೇಣುಕಾಚಾರ್ಯ ಗುಡುಗಿದರು.

ENGLISH SUMMARY….

MLA M.P. Renukacharya strikes against H. Vishwanath who demanded CM’s replacement
Bengaluru, June 17, 2021 (www.justkannada.in): MLA M.P. Renukacharya has responded to MLC H. Vishwanath’s demand to replace Chief Minister B.S. Yedyurappa.
“What moral rights do you have to speak against the party? You have to look at your age too when you call Yedyurappa old. You don’t have any moral rights to speak against the CM,” he said.
“H. Vishwanath didn’t get a berth in the cabinet because of court orders. Hence he is dejected and speaking in this way. Even though he lost BSY made him an MLC. A few outsiders also are supporting BSY,” he explained.
“He left the Congress party though he was given a place. He left JDS even when he was given power, thus he cheated them. It is not MLCs or MLAs who make a Chief Minister,” he added.
Keywords: MLA M.P. Renukacharya/ CM B.S. Yedyurappa/ strikes against H. Vishwanath

Key words: MLA-MP Renukacharya-against -H.Vishwanath -demanding -CM change