Monday, August 31, 2026

BDA Apartments

Home Front Page ಮಂತ್ರಿಗಿರಿಗಾಗಿ ಕಸರತ್ತು: 5 ಬಾರಿ ಗೆದ್ದಿದ್ದೇನೆ, ಅವಕಾಶ ಕೊಡಿ ಎಂದು ಕೇಳಿದ್ದೇನೆ- ಶಾಸಕ ಬಾಲಕೃಷ್ಣ

ಮಂತ್ರಿಗಿರಿಗಾಗಿ ಕಸರತ್ತು: 5 ಬಾರಿ ಗೆದ್ದಿದ್ದೇನೆ, ಅವಕಾಶ ಕೊಡಿ ಎಂದು ಕೇಳಿದ್ದೇನೆ- ಶಾಸಕ ಬಾಲಕೃಷ್ಣ

ಬೆಂಗಳೂರು,ಮೇ,29,2026 (www.justkannada.in):  ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಅಂಗೀಕಾರವಾಗಿದ್ದು ಸಚಿವ ಸಂಪುಟ ವಿಸರ್ಜನೆಯಾಗಿದೆ. ಈ ಬೆನ್ನಲ್ಲೆ ಇದೀಗ  ಮುಂದೆ ರಚನೆಯಾಗುವ ಹೊಸ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆಯಲು ಶಾಸಕರ ಲಾಬಿ ಶುರುವಾಗಿದೆ.

ಹಲವು ಶಾಸಕರು ಈಗಾಗಲೇ ದೆಹಲಿಯಾತ್ರೆ ಮಾಡಿ ಅಲ್ಲಿಯೇ ಬೀಡುಬಿಟ್ಟಿದ್ದು ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ.  ಅಂತೆಯೇ ಶಾಸಕ ಹೆಚ್.ಸಿ ಬಾಲಕೃಷ್ಣ ಸಹ ತಾವು ಹೊಸ ಸಚಿವ ಸಂಪುಟ ಸೇರಲು ಅವಕಾಶ ಕೇಳಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಾಲಕೃಷ್ಣ, ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ನಲ್ಲಿ ಸಚಿವರಾಗಿಲ್ಲ ಎಂಬ ಬೇಸರವಿದೆ. ನಾನು 5 ಬಾರಿ ಗೆದ್ದಿದ್ದೇನೆ. ಅವಕಾಶ ಕೋಡಿ ಎಂದು ಕೇಳಿದ್ದೇನೆ  ಹೊಸ ಕ್ಯಾಬಿನೆಟ್ ನಲ್ಲಿ ಅವಕಾಶ ಕೊಡಿ ಎಂದಿದ್ದೇನೆ.   ಸೋಮವಾರ ಅಥವಾ ಬುಧವಾರ ಪ್ರಮಾಣ ವಚನ ಸ್ವೀಕರಿಸಬಹುದು.

Key words:  chance, Minister Position, Cabinet, MLA, HC Balakrishna