Thursday, October 15, 2026

Dasara Wishes

Happy Dasara
Home Front Page ಬಿಡದಿ ಟೌನ್ ಶಿಪ್ ಹೆಸರಲ್ಲಿ ದುಡ್ಡು ಹೊಡೆಯಲು ರೈತರ ಭೂಮಿ ಬೇಕಾ? ಕೇಂದ್ರ ಸಚಿವ ಹೆಚ್...

ಬಿಡದಿ ಟೌನ್ ಶಿಪ್ ಹೆಸರಲ್ಲಿ ದುಡ್ಡು ಹೊಡೆಯಲು ರೈತರ ಭೂಮಿ ಬೇಕಾ? ಕೇಂದ್ರ ಸಚಿವ ಹೆಚ್ ಡಿಕೆ ಕಿಡಿ

ನವದೆಹಲಿ,ಜುಲೈ,14,2026 (www.justkannada.in): ಬಿಡದಿ ಟೌನ್ ಶಿಪ್ ಗಾಗಿ ಯಾಕಿಷ್ಟು ಜಿದ್ದಿಗೆ ಬಿದ್ದಿದ್ದೀರಿ. ಬಿಡದಿ ಟೌನ್ ಶಿಪ್ ಹೆಸರಲ್ಲಿ ದುಡ್ಡು ಹೊಡೆಯಲು ರೈತರ ಭೂಮಿ ಬೇಕಾ?  ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಗೆ ಭೂಮಿ ಕೊಡಲು 19 ಜನ ಮಾತ್ರ ಒಪ್ಪಿದ್ದಾರೆ.   ಒಪ್ಪಿರುವ ರೈತರು ಒಪ್ಪದ ರೈತರ ಜಮೀನು ಎಷ್ಟಿದೆ ಎಂದು ಗಮನಿಸಿ.  ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಠ ಮಾಡುವುದೇಕೆ?  ನಾನು ತಪ್ಪು ಮಾಡಿದ್ದರೆ ದೂರಿನಲ್ಲಿ ನನ್ನ ಹೆಸರನ್ನು ಉಲ್ಲೇಖಿಸಬೇಕಿತ್ತು.  ಪ್ರಚಾರಕ್ಕೆ ನನ್ನ ಹೆಸರು ಬಳಕೆ ಮಾಡಲಾಗುತ್ತಿದೆ ಸರ್ಕಾರದ ಭಂಡತನವನ್ನು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ.  ಕೊಲೆಗಡುಕ ಸರ್ಕಾರವೆಂದು ಒಮ್ಮೆ ಬಿರುದು ತೆಗೆದುಕೊಂಡಿದ್ದೀರಿ.  ರೈತರನ್ನು ಕೊಲೆಗಡುಕರನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದರು.

ಮಂಡಲಹಳ್ಳಿಯಲ್ಲಿ ನಿನ್ನೆ ಪ್ರತಿಭಟನೆ ವೇಳೆ ಹೆಣ್ಣು ಮಕ್ಕಳಿದ್ದರು.  ದೂರುದಾರ ಸಮೀರ್ ಗೆ ಆ ಹೆಣ್ಣು ಮಕ್ಕಳ ಹೆಸರು ಹೇಗೆ ಗೊತ್ತಾಯ್ತು?  ಮೊನ್ನೆ ದೆಹಲಿಗೆ ಬಂದು ಹೋದವರ ಹೆಸರನ್ನು ದೂರಿನಲ್ಲಿ ಸೇರಿಸಿದ್ದಾರೆ.   ಬಿಡದಿ ಟೌನ್ ಶಿಪ್  ವಿರುದ್ದ ರೈತರು ಶಾಂತಿಯುತ ಹೋರಾಟ ನಡೆಸಿ.  ಟೌನ್ ಶಿಪ್ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ಮಾಡೋಣ ಎಂದರು.

Key words: farmers,  land, Bidadi Township, Union Minister, HDK