Friday, October 30, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಮೂರು ತಿಂಗಳಿಗೊಮ್ಮೆ ಗೃಹ ಲಕ್ಷ್ಮೀ ಹಣ- ಶಾಸಕ ಬಸವರಾಜ ರಾಯರೆಡ್ಡಿ

ಮೂರು ತಿಂಗಳಿಗೊಮ್ಮೆ ಗೃಹ ಲಕ್ಷ್ಮೀ ಹಣ- ಶಾಸಕ ಬಸವರಾಜ ರಾಯರೆಡ್ಡಿ

ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಬೆಳಗಾವಿ,ಡಿಸೆಂಬರ್,10,2025 (www.justkannada.in):  ರಾಜ್ಯ ಸರ್ಕಾರದಿಂದ ಜಾರಿ ಮಾಡಲಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಮೂರು ತಿಂಗಳಿಗೊಮ್ಮೆ ಹಣ ಹಾಕುತ್ತೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜ್ ರಾಯರೆಡ್ಡಿ, ಗೃಹಲಕ್ಷ್ಮಿ ಹಣವನ್ನು ಮೂರು ತಿಂಗಳಿಗೊಮ್ಮೆ ನೀಡುತ್ತೇವೆ. ನಮ್ಮ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಯಾವುದೇ ತೊಂದರೆ ಇಲ್ಲ.

ಜಿಎಸ್ ಟಿ ಕಲೆಕ್ಷನ್ ಆದರೆ ಕೇಂದ್ರ ಸರ್ಕಾರ ಅರ್ಧ ಹಣ ಕೊಡಬೇಕು. ಆದರೆ ಅವರು ಕೋಡುವುದು 1 ತಿಂಗಳು, ಎರಡು ತಿಂಗಳು ತಡವಾಗುತ್ತೆ. ಈ ಮಧ್ಯೆ  ಮೂರು ತಿಂಗಳಿಗೊಮ್ಮೆ ಗೃಹ ಲಕ್ಷ್ಮೀ ಹಣ ಕೊಡುತ್ತೇವೆ ಎಂದರು.

Key words: GrihaLakshmi, money, three months, MLA, Basavaraja Rayareddy