ಹರಿಯಾಣ ಸಿಎಂ ಆಗಿ ಎಂ.ಎಲ್.ಖಟ್ಟರ್ ಇಂದು ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಅಕ್ಟೋಬರ್ 27, 2019 (www.justkannada.in): ಹರಿಯಾಣ ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ಅಂತಿಮ ಹಂತ ತಲುಪಿದೆ.

ಬಿಜೆಪಿಗೆ ದುಷ್ಯಂತ್ ಚೌಟಾಲಾ ಬೆಂಬಲ ನೀಡಲು ತೀರ್ಮಾನಿಸಿದ್ದು, ಎಂ.ಎಲ್. ಖಟ್ಟರ್ ಇಂದು ಸಿಎಂ ಆಗಿ, ದುಷ್ಯಾಂತ್ ಚೌಟಾಲಾ ಡಿಸಿಎಂ ಅಗಿ 2.30 ಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದುಷ್ಯಂತ್ ತಮ್ಮ ಆರು ಮಂದಿ ಶಾಸಕರ ಬೆಂಬಲವನ್ನು ಬಿಜೆಪಿಗೆ ನೀಡುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ರಾಜಕೀಯ ಬೆಳವಣಿಗೆಯ ಬಳಿಕ ಸಿಎಂ ಎಂ.ಎಲ್.ಖಟ್ಟರ್ 2 ನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.