ದೀಪಾವಳಿ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ, ಅಕ್ಟೋಬರ್ 27, 2019 (www.justkannada.in): ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

ಈ ಹಿನ್ನಲೆಯಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ದೀಪಾವಳಿ ಬರೀ ಹಬ್ಬವಲ್ಲ… ನಮ್ಮ ಸಂಸ್ಕೃತಿಯ ಸಾರ… ಭಾರತೀಯರಿಗೆ ದೀಪಾವಳಿ ಎಂದರೆ ಬಹುದೊಡ್ಡ ಹಬ್ಬ. ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಪ್ರೀತಿ, ಕಾಳಜಿ ಹಾಗೂ ಹಂಚಿಕೆಯ ದೀಪವನ್ನು ಬೆಳಗಿಸುವ ಮೂಲಕ ನಿರ್ಗತಿಕರ ಜೀವನದಲ್ಲಿ ಸಂತೋಷವನ್ನು ತರೋಣ ಎಂದು ರಾಷ್ಟ್ರಪತಿಗಳು ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಕೂಡ ಟ್ವಿಟ್ಟರ್ ನಲ್ಲಿ ಹಬ್ಬದ ಶುಭಾಶಯ ಕೋರಿದ್ದಾರೆ.