ಶಾಲಾ ಮಕ್ಕಳಿಗೆ ದೀಪಾವಳಿ !: ಬಿಸಿಯೂಟದ ಮೆನು ಬದಲಾಯಿಸಿದ ಸರಕಾರ

ಬೆಂಗಳೂರು, ಅಕ್ಟೋಬರ್ 27, 2019 (www.justkannada.in): ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ, ಮಧ್ಯಾಹ್ನದ ಬಿಸಿಯೂಟದ ಮೆನು ಬದಲಾವಣೆ ಆಗಲಿದೆ.

ಪರಿಷ್ಕೃತ ಆಹಾರ ಪಟ್ಟಿಯಂತೆ ನವೆಂಬರ್ 1ರಿಂದ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತದೆ. ನ.1ರಿಂದ ರಾಜ್ಯದ ಸರ್ಕಾರಿ/ಅನುಧಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟದ ಮೆನು ಹೀಗಿರಲಿದೆ..

ಸೋಮವಾರ – ಅನ್ನ, ಸೊಪ್ಪು, ತರಕಾರಿ ಸಾಂಬಾರು
ಮಂಗಳವಾರ – ತರಕಾರಿ ಪಲಾವ್ ಮತ್ತು ದಾಲ್. ತೊವ್ವೆ ಅಥವಾ ಟೊಮೆಟೋ ಬಾತ್ ಮತ್ತು ತರಕಾರಿ ಪಲ್ಯ
ಬುಧವಾರ – ಅನ್ನ, ಬೇಳೆ ರಸಂ ಮತ್ತು ಕಾಳು ಪಲ್ಯ/ ತರಕಾರಿ ಪಲ್ಯ
ಗುರುವಾರ – ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರು
ಶುಕ್ರವಾರ – ಬಿಸಿ ಬೇಳೆ ಬಾತ್ ಮತ್ತು ಖಾರ ಬೂಂಜಿ
ಶನಿವಾರ – ತರಕಾರಿ ಉಪ್ಪಿಟ್ಟು/ಗೋಧಿ ವಾಂಗಿಬಾತ್/ಗೋಧಿ ಪೊಂಗಲ್/ಚಪಾತಿ ಸಾಗು, ಪೂರಿ ಸಾಗು