ರಾಜಕೀಯ ದುರುದ್ದೇಶಕ್ಕೆ ಪೆನ್ ಡ್ರೈವ್ ದುರ್ಬಳಕೆ: ಹೆಚ್ ಡಿ ರೇವಣ್ಣ ಬಂಧಿಸುವ ಅಗತ್ಯವಿರಲಿಲ್ಲ- ಜೆಡಿಎಸ್ ಶಾಸಕ.

ಹಾಸನ ,ಮೇ,6,2024 (www.justkannada.in): ರಾಜಕೀಯ ದುರುದ್ದೇಶಕ್ಕಾಗಿ ಪೆನ್ ಡ್ರೈ ದುರ್ಬಳಕೆ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಶಾಸಕ ಹೆಚ್ .ಡಿ ರೇವಣ್ಣ ಅವರನ್ನ ಎಸ್ ಐಟಿ ಬಂಧಿಸುವ ಅವಶ್ಯಕತೆ ಇರಲಿಲ್ಲ  ಎಂದು ಶ್ರವಣಬೆಳಗೊಳ  ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣ ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಎನ್ ಬಾಲಕೃಷ್ಣ,  ಪೆನ್ ಡ್ರೈ ಪ್ರಕರಣವನ್ನು ದುರುದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ರೇವಣ್ಣ ಅವರನ್ನ ಬಂಧಿಸುವ ಅಗತ್ಯವಿರಲಿಲ್ಲ. ವಿಚಾರಣೆಗೆ ಕರೆಯಬಹುದಾಗಿತ್ತು. ನೋಟಿಸ್ ನೀಡಿ ವಶಕ್ಕೆ ಪಡೆಯಬಾರದಾಗಿತ್ತು ಎಂದರು.

ರೇವಣ್ಣ ಎಲ್ಲಿಯೂ ಅಡಗಿ ಕುಳಿತಿರಲಿಲ್ಲ. ಕೇಸ್ ದಾಖಲಾದಾಗಿನಿಂದಲೂ ಕ್ಷೇತ್ರದಲ್ಲೇ ಇದ್ದಾರೆ  ಕೂಡಲೇ ಎಸ್ ಐಟಿ ರೇವಣ್ಣ ಅವರನ್ನ ಬಿಡುಗಡೆ ಮಾಡಬೇಕು. ಎಸ್ ಐಟಿ ತನಿಖೆ ದಾರಿ ದಿಕ್ಕು ತಪ್ಪುತ್ತಿದೆ. ಪೆನ್ ಡ್ರೈವ್ ಹರಿಬಿಟ್ಟವರನ್ನು ಪತ್ತೆ ಮಾಡುವ ಬದಲು ರೇವಣ್ಣರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

Key words: Misuse, pen drive, HD Revanna, JDS MLA